ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಬೂಲ್ ಏರ್ ಪೋರ್ಟ್ ಬಳಿ ಮತ್ತೊಂದು ಸ್ಫೋಟ: 13 ಮಂದಿ ಸಾವು

ಕಾಬೂಲ್ ಏರ್ ಪೋರ್ಟ್ ಬಳಿ ಸ್ಫೋಟಗಳು ನಡೆಯುತ್ತಿದೆ. ಏರ್ ಪೋರ್ಟ್ ಬಳಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಹೋಟೆಲ್ ನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಇದು ಕೂಡ ಆತ್ಮಾಹುತಿ ಬಾಂಬ್ ದಾಳಿ ಎನ್ನಲಾಗಿದ್ದು ಹಲವಾರು ಜನ ಮೃತಪಟ್ಟು ದೇಹ ಛಿದ್ರ ಛಿದ್ರವಾಗಿವೆ.

ಆತ್ಮಾಹುತಿ ದಾಳಿಕೋರರು ಈ ದಾಳಿ ನಡೆದ ಸುತ್ತ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಏರ್ ಪೋರ್ಟ್ ಗೇಟ್ ಬಳಿ ಸಂಭವಿಸಿದ ಸ್ಫೋಟದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಸಂಘಟನೆ ಘೋಷಿಸಿದೆ. ಎರಡನೇ ಬಾರಿ ನಡೆದ ಸ್ಫೋಟದಲ್ಲಿನ ಸಾವು-ನೋವುಗಳ ಬಗ್ಗೆ ತಿಳಿದುಬಂದಿಲ್ಲ.

Edited By : Nagaraj Tulugeri
PublicNext

PublicNext

26/08/2021 09:27 pm

Cinque Terre

109.13 K

Cinque Terre

2