ದುಮ್ಕಾ: ಶಾರೂಖ್ ಎಂಬಾತ ಹಚ್ಚಿದ್ದ ಬೆಂಕಿಗೆ ಬಲಿಯಾಗಿದ್ದ ಝಾರ್ಖಂಡ್ ಯುವತಿ ಅಂಕಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಳು. ಅಂಕಿತಾಳ ಅಂತಿಮ ಯಾತ್ರೆ ಭಾರಿ ಬಿಗಿ ಭದ್ರತೆ ನಡುವೆ ದುಮ್ಕಾ ನಗರದಲ್ಲಿ ನಡೆಯಿತು.
ಅಂತಿಮ ಯಾತ್ರೆಯಲ್ಲಿ ಶಸ್ತ್ರ ಸಜ್ಜಿತ ಪೊಲೀಸರು ಅಹಿತಕರ ಘಟನೆ ನಡೆಯದಂತೆ ಅಲರ್ಟ್ ಆಗಿದ್ದರು. ಇನ್ನು ಸಾವಿರಾರು ಜನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕೃತ್ಯ ಎಸಗಿದ ಆರೋಪಿ ಶಾರೂಖ್ ಹಾಗೂ ಕೃತ್ಯಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿಗೂ ತ್ವರಿತವಾಗಿ ನಿದರ್ಶನೀಯ ಶಿಕ್ಷೆ ಆಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
PublicNext
30/08/2022 08:00 pm