ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮನಿಗೆ 28 ವರ್ಷದ ಬಳಿಕ ಸಿಕ್ಕ ಮಗ, ರೇಪಿಸ್ಟ್ ಅಪ್ಪನನ್ನ ಹುಡುಕಿಕೊಟ್ಟ!

ಶಹಜಾನ್‌ಪುರ್: ಆಕೆ ಮೇಲೆ ರೇಪ್ ಆಗಿತ್ತು.ಆಕೆ ಗರ್ಭಿಣಿ ಕೂಡ ಆಗಿದ್ದಳು. ಹಾಗೆ ಹುಟ್ಟುದ ಮಗುವನ್ನ ಆ ಅಮ್ಮ ಅನಾಥವಾಗಿಯೇ ಬಿಟ್ಟು ಹೋಗಿದ್ದಳು. ಆದರೆ, ಅದೇ ಯುವಕ 28 ವರ್ಷದ ಬಳಿಕ ಆ ಅಮ್ಮನನ್ನ ಹುಡುಕಲು ಯಶಸ್ವಿಯಾಗಿದ್ದಾನೆ.

ಈ ಒಂದು ಘಟನೆ ಉತ್ತರ ಪ್ರದೇಶದ ಶಹಜಾನ್‌ಪುರದಲ್ಲಿ ನಡೆದಿದೆ. ಅಂದ್ಹಾಗೆ ಈ ಅಮ್ಮನ ಮೇಲೆ 1994 ರಲ್ಲಿ ಗ್ಯಾಂಗ್ ರೇಪ್ ಆಗಿತ್ತು.ಆಗ ಈಕೆಗೆ ಕೇವಲ 12 ವರ್ಷ. ಸೋದರಮಾವನ ಜೊತೆಗೆ ವಾಸವಾಗಿದ್ದಳು.ಆದರೆ, ಮನೆ ಸಮೀಪದಲ್ಲಿಯೇ ಇದ್ದ ಇಬ್ಬರು ಈಕೆ ಮೇಲೆ ಅತ್ಯಾಚಾರ ಎಸಗಿದ್ದರು. ದೂರು ದಾಖಲಿಸದಂತೆ ಧಮ್ಕಿ ಕೂಡ ಹಾಕಿದ್ದರು. ಆದರೆ, ಬಾಲಕಿ ಗರ್ಭಿಣಿಯಾಗಿದ್ದಳು ಗಂಡು ಮಗುವಿಗೆ ಜನ್ಮ ಕೂಡ ನೀಡಿದ್ದಳು.

ಹೀಗೆ ಹುಟ್ಟಿದ ಮಗುವನ್ನ ಬೇರೆಯವರಿಗೆ ನೀಡಿ ಬಾಲಕಿಯ ಕುಟುಂಬ ಶಹಜಾನ್‌ಪುರಿಂದ ರಾಂಪುರಕ್ಕೆ ಸ್ಥಳಾಂತರಗೊಂಡಿತ್ತು. ಮದುವೆ ಕೂಡ ಆಯಿತು. ದುರಂತ ಅಂದ್ರೆ, ಅತ್ಯಾಚಾರ ಆಗಿರೋ ವಿಷಯ ತಿಳಿದು ಆಕೆಯಿಂದ ಗಂಡ ವಿಚ್ಛೇದನ ಪಡೆದು ದೂರ ಆಗಿಯೇ ಬಿಟ್ಟ. ಆದರೆ, ಈ ನಡುವೆ ಬೇರೆಯವರ ಮನೆಯಲ್ಲಿ ಬೆಳೆಯುತ್ತಿದ್ದ ಮಗನ ತನ್ನ ಅಸಲಿ ತಾಯಿಯನ್ನ ಹುಡುಕಲು ಆರಂಭಿಸಿದನು.

ಆಗಲೇ ಅಲ್ಲಿ ಇಲ್ಲಿ ಕೇಳಿಕೊಂಡು ಅಮ್ಮನ ವಿಳಾಸ ತಿಳಿದುಕೊಂಡು ಹಡೆದವ್ವನನ್ನ ಭೇಟಿಯಾದನು.ಎಲ್ಲ ವಿಚಾರವನ್ನೂ ಆಕೆ ಮೂಂದೆ ಹೇಳಿದನು. ಆಗ ಅಮ್ಮನಿಗೆ ನಿಜಕ್ಕೂ ಸ್ವರ್ಗವೇ ಸಿಕ್ಕಂತಾಯಿತು ನೋಡಿ. ಆದರೆ, ತಂದೆ ಯಾರೂ ಅಂತ ಹುಡುಕ ಹೊರಟಾಗ ಇಬ್ಬರು ರೇಪ್ ಮಾಡಿದ್ದರಿಂದ ಡಿಎನ್‌ಎ ಪರೀಕ್ಷೆಗೆ ಅಮ್ಮ ಕೋರ್ಟ ಮೆಟ್ಟಿಲೇರಿದಳು. ಕೋರ್ಟ ಕೂಡ ಡಿಎನ್‌ಎ ಪರೀಕ್ಷೆ ಅನುಮತಿ ನೀಡಿತು. ಅಲ್ಲಿಗೆ ಹೈದ್ರಬಾದ್ ನಲ್ಲಿದ್ದ ಆರೋಪಿ ಮೊಹ್ಮದ್ ರಾಜಿಯನ್ನ ಪೊಲೀಸರು ಬಂಧಿಸಿ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಅದು ಮ್ಯಾಚ್ ಆಗಿದೆ. ಆದರೆ, ಇನ್ನೊಬ್ಬ ಆರೋಪಿ ನಖಿ ಹಸನ್ ಸದ್ಯ ಒಡಿಶಾದಲ್ಲಿದ್ದಾನೆ. ಈತನ ಬಂಧನಕ್ಕೂ ಪೊಲೀಸರು ಮುಂದಾಗಿದ್ದಾರೆ.

Edited By :
PublicNext

PublicNext

04/08/2022 10:04 pm

Cinque Terre

68.83 K

Cinque Terre

6

ಸಂಬಂಧಿತ ಸುದ್ದಿ