ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಾ. ಸುಧಾಮೂರ್ತಿ ಬಗ್ಗೆ ಅವಹೇಳನ ಆರೋಪ: ವೆಬ್ ಸೀರೀಸ್ ನಿರ್ದೇಶಕ ವಿರುದ್ಧ ದೂರು

ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಬಗ್ಗೆ ಅವಹೇಳನ ಮಾಡಿರುವ ಆರೋಪದಡಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಓಲ್ಡ್ ಟೌನ್ ಕ್ರಿಮಿನಲ್ಸ್ ಎಂಬ ವೆಬ್ ಸೀರೀಸ್ ನಲ್ಲಿ ಸುಧಾಮೂರ್ತಿಗೆ ಅವಹೇಳನ ಮಾಡಿರುವ ಆರೋಪ ಕೇಳಿಬಂದಿದೆ.

ಓಲ್ಡ್ ಟೌನ್ ಕ್ರಿಮಿನಲ್ಸ್ ಎಂಬ ವೆಬ್ ಸೀರೀಸ್ ನಿರ್ದೇಶಕ ಅಮರ್ ಹಾಗೂ ಸೀರೀಸ್ ನ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ರಾಜಾಧ್ಯಕ್ಷ ಜಯರಾಜ್ ನಾಯ್ಡು ನೀಡಿದ್ದಾರೆ.

ವೆಬ್ ಸೀರೀಸ್ ನಲ್ಲಿ ಬರುವ ಸನ್ನಿವೇಶದಲ್ಲಿ ಸುಧಾಮೂರ್ತಿ ಅಮ್ಮನವರ ಹೆಸರ ಬದಲಿಸಿ, ಏಕವಚನದಲ್ಲಿ ಅವಳು, ಇವಳು ಅಂದಿದ್ದಲ್ಲದೇ, ಗಂಡನ ದುಡ್ಡಲ್ಲಿ ಶೋಕಿ ಮಾಡುವವಳು ಎಂದು ಅವಹೇಳನಕಾರಿ ಪದ ಬಳಕೆ ಮಾಡಲಾಗಿದೆ ಎಂದು ಎಫ್ ಐ ಆರ್ ನಲ್ಲಿ ಜಯರಾಜ್ ನಾಯ್ಡು ಉಲ್ಲೇಖಿಸಿದ್ದಾರೆ.

ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Edited By : Nirmala Aralikatti
PublicNext

PublicNext

26/10/2020 05:42 pm

Cinque Terre

109.13 K

Cinque Terre

25

ಸಂಬಂಧಿತ ಸುದ್ದಿ