ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ರಾಷ್ಟ್ರಧ್ಜಜ ಹಿಡಿದ ಶಿಕ್ಷಕ ಅಭ್ಯರ್ಥಿಯನ್ನು ಥಳಿಸಿದ ಅಪರ ಜಿಲ್ಲಾಧಿಕಾರಿ

ಪಾಟ್ನಾ: ವಿವಿಧ ಬೇಡಿಕೆಗಳ ಈಡೇರಿಕೆಗಗಾಗಿ ಶಿಕ್ಷಕ ಅಭ್ಯರ್ಥಿಗಳು ಇಂದು ಬಿಹಾರದ ಪಾಟ್ನಾ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ವೇಳೆ ಓರ್ವ ಶಿಕ್ಷಕ ಅಭ್ಯರ್ಥಿ ಮೇಲೆ ಪಾಟ್ನಾ ಅಪರ ಜಿಲ್ಲಾಧಿಕಾರಿ ಕೆ.ಕೆ ಸಿಂಗ್ ಅವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಶಿಕ್ಷಕ ಅಭ್ಯರ್ಥಿಯ ಕತ್ತಿನ ಭಾಗದಿಂದ ರಕ್ತ ಒಸರಿದೆ.

ಬಾಕಿ ಇರುವ ವೇತನ ಪಾವತಿ ಹಾಗೂ ಸೇವೆ ಖಾಯಂ ಮಾಡಲು ಶಿಕ್ಷಕರು ಬಿಹಾರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಸೋಮವಾರ ಈ ಪ್ರತಿಭಟನೆ ತೀವ್ರಗೊಂಡಿದೆ. ಹೀಗಾಗಿ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಲಾಠಿ ಬೀಸಿದ್ದಾರೆ. ಇದೇ ವೇಳೆ ತ್ರಿವರ್ಣ ಧ್ವಜ ಹಿಡಿದು ಬಂದ ಶಿಕ್ಷಕ ಅಭ್ಯರ್ಥಿ ಮೇಲೆ ಅಪರ ಜಿಲ್ಲಾಧಿಕಾರಿ ಮಾರಣಾಂತಿಕವಾಗಿ ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಪರ ಜಿಲ್ಲಾಧಿಕಾರಿಗೆ ಹೊಡೆಯುವ ಅಧಿಕಾರ ಇದೆಯಾ? ಎಂದು ಬಿಹಾರದ ಜನ ಆಕ್ರೋಶಿತರಾಗಿ ಪ್ರಶ್ನೆ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

22/08/2022 05:46 pm

Cinque Terre

97.2 K

Cinque Terre

12

ಸಂಬಂಧಿತ ಸುದ್ದಿ