ವರದಿ: ರವಿ ಕುಮಾರ್, ಕೋಲಾರ
ಕೋಲಾರ: ಕಸಾಯಿಖಾನೆಗೆ ಸಾಗಿಸಲು ಅಕ್ರಮವಾಗಿ ಕೂಡಿ ಹಾಕಿದ್ದ 12 ಗೋವುಗಳ ರಕ್ಷಣೆಯನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಮಾಡಿದ್ದಾರೆ.
ಪಟ್ಟಣದ ರಹೀಂ ಕಾಂಪೌಂಡ್ ನಲ್ಲಿ ಸೈಯ್ಯದ್ ಅತಾವುಲ್ಲಾ, ಸೈಯ್ಯದ್ ಇದಾಯತುಲ್ಲಾ, ಸಾದಿಕ್ ಎನ್ನುವವರು ಹಿಂಸಾತ್ಮಕವಾಗಿ ಹಸುಗಳನ್ನ ಕೂಡಿ ಹಾಕಿದ್ರು. ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಹಾಗೂ ತಹಶೀಲ್ದಾರ್ ಜಂಟಿ ಕಾರ್ಯಾಚರಣೆ ನಡೆಸಿ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
31/07/2022 10:11 am