ಚಂಡೀಗಢ: ಗಣಿ ದಂಧೆಕೋರರು ಡಿಎಸ್‌ಪಿಯ ಮೇಲೆ ಲಾರಿ ಹತ್ತಿಸಿ ಕೊಲೆಗೈದಿದ್ದಾರೆ. ಪಂಜಾಬ್‌ನ ನೂಹ್ ಜಿಲ್ಲೆಯ ಪಚಗಾಂವ್ ಬೆಟ್ಟಗಳ ನಡುವೆ ಈ ಕೃತ್ಯ ನಡೆದಿದೆ.
ಡಿಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರ ಮೇಲೆ ಟ್ರಕ್ ಹತ್ತಿಸಿದ ದುರುಳರು ಕೊಲೆ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಮೂಲಕ ತೆಗೆದ ಕಲ್ಲುಗಳನ್ನು ಹೇರಿಕೊಂಡು ಹೊರಟಿದ್ದ ಲಾರಿಯನ್ನು ಸುರೇಂದ್ರ ಸಿಂಗ್ ಗಮನಿಸಿದ್ದಾರೆ. ಆ ಲಾರಿಯನ್ನು ತಡೆಯಲು ಯತ್ನಿಸಿದ ವೇಳೆ ಚಾಲಕ ಲಾರಿಯನ್ನು ಡಿಎಸ್‌ಪಿ ಸುರೇಂದ್ರ ಸಿಂಗ್ ಮೇಲೆ ಹತ್ತಿಸಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಹರಿಯಾಣದ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಓರ್ವ ಆರೋಪಿಯನ್ನು ನೂಹ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ ಕೃತ್ಯದಲ್ಲಿ ಭಾಗಿಯಾದ ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
PublicNext
19/07/2022 09:12 pm