ಬೆಂಗಳೂರು: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಮಗಮದ ಅಧ್ಯಕ್ಷರಾಗಿದ್ದ ರಾಘವೇಂದ್ರ ಶೆಟ್ಟಿ ವಿರುದ್ಧ ವಾರಂಟ್ ಜಾರಿ ಮಾಡುವಲ್ಲಿ ಪೊಲೀಸರು ಫೇಲ್ ಆಗಿದ್ದಾರೆ ಎಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ನ್ಯಾಯಾಲಯವು 2019ರಿಂದ ಬಂಧಿಸುವಂತೆ, ಇನ್‍ಸ್ಪೆಕ್ಟರ್ ಮತ್ತು ಆಯುಕ್ತರಿಗೆ ಆದೇಶ ನೀಡಿದೆ. ಆದರೆ ಪೊಲೀಸರು ರಾಘವೇಂದ್ರ ಶೆಟ್ಟಿ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಸಬೂಬು ಹೇಳುತ್ತಿದ್ದಾರೆ. ಅವರು ನಿನ್ನೆಯವರೆಗೆ ನಿಗಮದ ಅಧ್ಯಕ್ಷರಾಗಿದ್ದರು. ದಯವಿಟ್ಟು ಗಮನಿಸಿ ಎಂದು ತಿಳಿಸಿದ್ದಾರೆ. ವಾರಂಟ್ ಸಂಬಂಧ ವಿಫಲರಾದ ಪೊಲೀಸರಿಗೆ ಐಪಿಸಿ 166, 166ಎ, 166ಬಿ ವಿಧಿಗಳ ಅನ್ವಯ ಶಿಕ್ಷೆ ವಿಧಿಸಬಹುದಾಗಿದೆ. ಒಬ್ಬ ವ್ಯಕ್ತಿ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಪೊಲೀಸರು ಆತನು ತಲೆಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯಗಳಿಗೆ ಹೇಳುವುದು ಒಪ್ಪಿತವಲ್ಲ. ರಾಘವೇಂದ್ರ ಶೆಟ್ಟಿ ವಿರುದ್ಧ ದೂರು ನೀಡಿರುವ 65 ವರ್ಷದ ಹಿರಿಯ ನಾಗರಿಕನಿಗೆ ಇಂದಿಗೂ ಅವರು ತೊಂದರೆ ನೀಡುತ್ತಲೇ ಇದ್ದಾರೆ ಎಂದು ರೂಪಾ ಮೌದ್ಗಿಲ್ ಹೇಳಿದ್ದಾರೆ.
PublicNext
16/07/2022 03:56 pm