ಬೆಂಗಳೂರು: ಒಂದು ಕಡೆ ಪಿಎಸ್‌ಐ ನೇಮಕಾತಿ ಅಕ್ರಮ ಸಿಐಡಿ ತನೆಖೆಯಲ್ಲಿರುವಾಗಲೇ ಡಿಗ್ರಿ ಕಾಲೇಜ್ ಅಸಿಸ್ಟೆಂಟ್ ಪ್ರೊಫೆಸರ್ ಎಕ್ಸಾಮ್‌ನಲ್ಲೂ ಅಕ್ರಮ ನಡೆದಿದೆ ಎಂದು ಗುಲ್ಲೆದ್ದಿದೆ. ನಿರ್ದಿಷ್ಟ ಪತ್ರಿಕೆಯ ಪ್ರಶ್ನೆಗಳು ಲೀಕ್ ಆಗಿದ್ವು ಅನ್ನೋ ಆರೋಪ ಕೇಳಿ ಬಂದಿದ್ದು, ಎಕ್ಸಾಮ್‌ಗೂ ಮೊದಲೇ ಅಭ್ಯರ್ಥಿಗಳ ಮೊಬೈಲ್‌ನಲ್ಲಿ ಪ್ರಶ್ನೆಗಳು ಹರಿದಾಡಿದೆ ಎನ್ನಲಾದ ಸ್ಕ್ರೀನ್ ಶಾಟ್ ವೈರಲ್ ಆಗಿದೆ. 20ಕ್ಕೂ ಹೆಚ್ಚು ಪ್ರಶ್ನೆಗಳು ಅಭ್ಯರ್ಥಿಯೊಬ್ಬನ ಮೊಬೈಲ್‌ನಲ್ಲಿ ನೋಡಿದ್ದಾಗಿ ಸ್ಪರ್ಧಾಕಾಂಕ್ಷಿ ಅಭ್ಯರ್ಥಿ ದೂರು ನೀಡಿದ್ದಾರೆ.
ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ಕೆಇಎ ದೂರು ನೀಡಿದೆ. ಕೆಇಎ 1,242 ಅಸಿಸ್ಟೆಂಟ್ ಪ್ರೊಫೆಸರ್ ಪೋಸ್ಟ್ ಗಳಿಗೆ ನೋಟಿಫಿಕೇಷನ್ ಹೊರಡಿಸಿತ್ತು. ಈ ಹಿನ್ನಲೆ ಕಳೆದ ತಿಂಗಳು ಮಾರ್ಚ್ 12ರಿಂದ 15 ರವರೆಗೆ ಪರೀಕ್ಷೆ ಕೂಡ ನಡೆದಿತ್ತು. ಆಪ್ಷನಲ್ ಸಬ್ಜೆಕ್ಟ್ 125 ಪ್ರಶ್ನೆಗಳಿದ್ದು, ಇದಕ್ಕೆ 250 ಅಂಕ ನಿಗದಿಯಾಗಿತ್ತು. ಜನರಲ್ ನಾಲೆಡ್ಜ್ ಪೇಪರ್ 50 ಪ್ರಶ್ನೆ 50 ಅಂಕ ಒಳಗೊಂಡಿತ್ತು. ಎಕ್ಸಾಮ್‌ಗೂ ಮೊದಲು ಭೂಗೋಳ ಶಾಸ್ರ್ತದ ಪೇಪರ್ ಲೀಕ್ ಆಗಿರುವ ಬಗ್ಗೆ ದೂರು ನೀಡಿದ್ದು, ಭೂಗೋಳ ಶಾಸ್ತ್ರದ ಕೆಲ ಪ್ರಶ್ನೆಗಳು ಲೀಕ್ ಆಗಿವೆ ಅಂತ ದೂರು ದಾಖಲಾಗಿದೆ. ಸೌಮ್ಯ ಆರ್ ಎಂಬುವರ ಮೊಬೈಲ್‌ನಿಂದ 18 ಪ್ರಶ್ನೆಗಳು ಹರಿದಾಡಿವೆ. ಯಾರಿಗೆಲ್ಲಾ ವಾಟ್ಸಾಪ್‌ನಲ್ಲಿ ಪ್ರಶ್ನೆಗಳು ಹರಿದಾಡಿವೆ? ಎಲ್ಲಿಂದ ಪ್ರಶ್ನೆಗಳು ಲೀಕ್ ಆಗಿವೆ ಎಂಬ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಲಾಗಿದೆ.
PublicNext
24/04/2022 07:03 pm