ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇಶದ ಭದ್ರತೆಗೆ ಬಾಂಗ್ಲಾ ಅಕ್ರಮ ವಲಸಿಗರಿಂದ ಕುತ್ತು - ಆರಗ ಜ್ಞಾನೇಂದ್ರ

ಬೆಂಗಳೂರು: ಇವತ್ತು ನಮ್ಮ ಸಿಸಿಬಿ ಅಧಿಕಾರಿಗಳು ಐದು ಜನ ಬಾಂಗ್ಲಾ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದಿದ್ದಾರೆ,ಅಕ್ರಮ ವಲಸಿಗರ ಬಗ್ಗೆ ವಿಶೇಷ ಕ್ರಮ ವಹಿಸಲಾಗುತ್ತದೆ.ಎಲ್ಲಾ ಠಾಣೆಗಳಲ್ಲೂ ಅಕ್ರಮ ವಲಸಿಗರ ಪತ್ತೆ ಮಾಡಬೇಕು ಎಂದು ಸೂಚಿಸಿದ್ದೇನೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ದೇಶದ ಭದ್ರತೆಗೆ ಅವರು ಅಪಾಯಕಾರಿ,ಅವರ ವಿರುದ್ಧ ವಿಶೇಷವಾದ ತನಿಖೆಯನ್ನು ನಡೆಸಲಾಗುತ್ತಿದೆ, ಕಾಫಿ ಎಸ್ಟೇಟ್ ಗಳಲ್ಲಿ, ಬಿಲ್ಡಿಂಗ್ ವರ್ಕರ್ಸ್ ಗಳಾಗಿ ಬಂದು ಸೇರಿಕೊಂಡವರೂ ಇದ್ದಾರೆ . ಇನ್ನೂ ಎಷ್ಟು ಮಂದಿಯನ್ನು ಈ ರೀತಿ ಅಕ್ರಮವಾಗಿ ಕರೆ ತರಲಾಗಿದೆ ಎಂಬುದನ್ನೂ ಬಾಯಿ ಬಿಡಿಸುತ್ತೇವೆ ಎಂದರು.

ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮಾಡಿಕೊಂಡಿದ್ದಾರೆ .ಬಡವರಿಗೆ ಸಿಗುವ ಯೋಜನೆಗಳನ್ನೂ ಇವರು ತೆಗೆದುಕೊಂಡಿದ್ದಾರೆ.ಯಾರು ಇಲ್ಲಿಗೆ ಅಂಥವರನ್ನು ಕರೆದುಕೊಂಡು ಬರ್ತಿದ್ದಾರೆ ಎನ್ನುವುದನ್ನು ಪತ್ತೆ ಹಚ್ವಿ ಅಂಥಹ ಶಕ್ತಿಗಳನ್ನೇ ದಮನ ಮಾಡ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Edited By : Manjunath H D
PublicNext

PublicNext

26/11/2021 01:30 pm

Cinque Terre

63.46 K

Cinque Terre

7

ಸಂಬಂಧಿತ ಸುದ್ದಿ