ಚಂಡೀಗಢ; ಹಾಸ್ಟೆಲ್ ನಲ್ಲಿ 60 ವಿದ್ಯಾರ್ಥಿನಿಯರು ಸ್ನಾನ ಮಾಡಿರುವ ವಿಡಿಯೋ ಲೀಕ್ ಆದ ಘಟನೆ ಪಂಜಾಬ್ ನ ಚಂಡೀಗಢ ವಿಶ್ವವಿದ್ಯಾಲಯದ ಮಹಿಳಾ ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ನಡೆದಿದೆ.ಸದ್ಯ ವಿಡಿಯೋ ಲೀಕ್ ಆದ ಬಗ್ಗೆ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ಇದರ ಬೆನ್ನಲ್ಲೇ 8 ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಸ್ಟೆಲ್ ನಲ್ಲಿದ್ದ ಓರ್ವ ವಿದ್ಯಾರ್ಥಿನಿಯೇ ವಿಡಿಯೋಗಳನ್ನು ತೆಗೆದು ತನ್ನ ಬಾಯ್ ಫ್ರೆಂಡ್ ಗೆ ಕಳುಹಿಸಿದ್ದಾಳೆ ಎನ್ನಲಾಗಿದ್ದು, ಆತ ಅವುಗಳನ್ನು ಇಂಟರ್ ನೆಟ್ ಗೆ ಅಪ್ ಲೋಡ್ ಮಾಡಿದ್ದಾರೆ. ವಿದ್ಯಾರ್ಥಿನಿಯರ ವಿಡಿಯೋಗಳು ಅಶ್ಲೀಲ ಜಾಲತಾಣದಲ್ಲಿ ಪ್ರಸಾರವಾದ ಕಾರಣ 8ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯ ಈ ಘಟನೆ ದೇಶದಾದ್ಯಂತ ಸಂಚಲನವನ್ನು ಸೃಷ್ಟಿ ಮಾಡಿದ್ದು, ವಿಶ್ವವಿದ್ಯಾಲಯದಲ್ಲಿದ್ದ ವಿದ್ಯಾರ್ಥಿಗಳು ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ಬಗ್ಗೆ ಪಂಜಾಬ್ ಶಾಲಾ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಟ್ವೀಟ್ ಮಾಡಿದ್ದು,’ಯಾವ ತಪ್ಪಿತಸ್ಥರನ್ನು ಬಿಡುವುದಿಲ್ಲ. ವಿವಿಯ ಎಲ್ಲ ವಿದ್ಯಾರ್ಥಿಗಳು ಶಾಂತವಾಗಿರಲು ನಾನು ವಿನಂತಿಸುತ್ತೇನೆ. ಇದು ಸೂಕ್ಷ್ಮ ವಿಚಾರ ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಘನತೆಗೆ ಸಂಬಂಧಿಸಿದೆ ಎಂದಿದ್ಧಾರೆ.
PublicNext
18/09/2022 12:12 pm