ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್ ಕಿಂಗ್ ಪಿನ್ ವಿರೇನ್ ಖನ್ನಾಗೆ ಮಂಪರು ಪರೀಕ್ಷೆ : ಕೋರ್ಟ್ ಅನುಮತಿ

ಬೆಂಗಳೂರು : ಡ್ರಗ್ಸ್ ಜಾಲದ ಪ್ರಮುಖ ರೂವಾರಿ ವಿರೇನ್ ಖನ್ನಾ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಸಿಸಿಬಿ ಪೊಲೀಸರು ಮಾಡಿದ ಮನವಿಗೆ ಸಿಸಿಎಚ್ ನ್ಯಾಯಾಲಯ ಸಮ್ಮತಿಸಿದೆ.

ಸ್ಯಾಂಡಲ್ವುಡ್ ನಟಿಯರು ಸೇರಿದಂತೆ ಹಲವಾರು ಪ್ರಮುಖರು ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡಿರುವವರ ವಿಚಾರಣೆ ವೇಳೆ ಸಿಸಿಬಿ ಪೊಲೀಸರು ಜಾಲದ ಕಿಂಗ್ಪಿನ್ ವಿರೇನ್ ಖನ್ನಾ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿತ್ತು.

ವಿಚಾರಣೆ ಸಂದರ್ಭದಲ್ಲಿ ಖನ್ನಾ ಪೊಲೀಸರಿಗೆ ಸಮರ್ಪಕ ಮಾಹಿತಿ ನೀಡದೆ ಸತಾಯಿಸುತ್ತಿದ್ದ.

ಆತನ ಮೊಬೈಲ್ ಫೋನ್ನ ಪಾಸ್ ವರ್ಡ್ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಖನ್ನಾ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಪೊಲೀಸರು ತೀರ್ಮಾನಿಸಿದ್ದರು.

ಸಿಸಿಬಿ ಪೊಲೀಸರ ಮನವಿ ಮೇರೆಗೆ ಖನ್ನಾ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯ ಸಮ್ಮತಿ ನೀಡಿರುವುದರಿಂದ ಆತನನ್ನು ಶೀಘ್ರದಲ್ಲೇ ಮಂಪರು ಪರೀಕ್ಷೆಗೆ ಒಳಪಡಿಸಲಾಗುವುದು.

Edited By : Nirmala Aralikatti
PublicNext

PublicNext

02/10/2020 03:49 pm

Cinque Terre

96.04 K

Cinque Terre

0

ಸಂಬಂಧಿತ ಸುದ್ದಿ