200 ಕೋಟಿ ರೂ ವಂಚನೆ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಕಾರಣಕ್ಕೆ ಶ್ರೀಲಂಕಾ ಬೆಡಗಿ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸಂಕಷ್ಟ ಶುರುವಾಗಿದೆ. ಪ್ರಕರಣದ ಕಿಂಗ್ ಪಿನ್ ವಂಚಕ ಸುಕೇಶ್ ಚಂದ್ರಶೇಖರ್ ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಲಿಂಕ್ ಹೊಂದಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕೆ ಸದ್ಯ ಜಾಕ್ವೆಲಿನ್ ಅವರಿಂದ ಸಲ್ಮಾನ್ ಖಾನ್ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಸಲ್ಲು ಹಾಗೂ ಜಾಕ್ವೆಲಿನ್ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಹಲವು ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸದ್ಯ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಪುಷ್ಠಿ ನೀಡುವಂತೆ ವಂಚಕ ಸುಕೇಶ್ ಜತೆ ಜಾಕ್ವೆಲಿನ್ ಫರ್ನಾಂಡಿಸ್ ಕಿಸ್ಸಿಂಗ್ ಫೋಟೋಗಳು ಲೀಕ್ ಆಗಿವೆ.
ಜಾಕ್ವೆಲಿನ್ ಅವರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ (ಇಡಿ) ನಿರ್ಧರಿಸಿದೆ. ಈ ಕಾರಣಕ್ಕೆ ಡಿಸೆಂಬರ್ 10ಕ್ಕೆ ರಿಯಾದ್ ನಲ್ಲಿ Da-bangg ಕಾರ್ಯಕ್ರಮಲ್ಲಿ ಸಲ್ಮಾನ್ ಖಾನ್ ಹಾಗೂ ಜಾಕ್ವೆಲಿನ್ ಒಟ್ಟಾಗಿ ತೆರಳಬೇಕಿತ್ತು. ಆದರೆ, ಜಾಕ್ವೆಲಿನ್ ಮಾಡಿಕೊಂಡ ಎಡವಟ್ಟಿನಿಂದ ಅವರಿಗೆ ಈ ಕಾರ್ಯಕ್ರಮಕ್ಕೆ ಹೋಗಲು ಅವಕಾಶವಿಲ್ಲ.
PublicNext
06/12/2021 09:38 am