ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ.26ಕ್ಕೆ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ : ಬಾಂಬೆ ಹೈಕೋರ್ಟ್

ಮುಂಬೈ : ಡ್ರಗ್ ಕೇಸ್ ನಲ್ಲಿ ಬಂಧನಕ್ಕೊಳಗಾಗಿರುವ ಆರ್ಯನ್ ಖಾನ್ ಗೆ ಜಾಮೀನು ಎರಡು ಬಾರಿ ಕೈ ತಪ್ಪಿದ್ದರಿಂದ ಆರ್ಯನ್ ಪರ ವಕೀಲ ಸತೀಶ್ ಮನೆಶಿಂಧೆ ಜಾಮೀನು ಅರ್ಜಿಯನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಬಾಂಬೆ ಹೈಕೋರ್ಟ್ ಮೊರೆಹೋಗಿದ್ದರು.

ಸದ್ಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎನ್.ಡಬ್ಲ್ಯೂ ಸಾಂಬ್ರೆ ಅ.26 ರಂದು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎನ್.ಡಬ್ಲ್ಯೂ ಸಾಂಬ್ರೆ ಅದೇಶ ಹೊರಡಿಸಿದ್ದಾರೆ.

ಎನ್ ಸಿಬಿ ಪರ ವಕಾಲತ್ತು ವಹಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಮುಂದಿನ ವಾರದವರೆಗೂ ಸಮಯವಕಾಶ ಕೇಳಿದ್ದರಿಂದ ನ್ಯಾಯಮೂರ್ತಿ ಸಾಂಬ್ರೆ ಅವರು ವಿಚಾರಣೆಯನ್ನುಅಕ್ಟೋಬರ್ 26 ರಂದು ನಡೆಸಲಾಗುವುದು ಎಂದು ಹೇಳಿದರು. ಆರ್ಯನ್ ಖಾನ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದ ವಿಶೇಷ ಎನ್ ಡಿಪಿಎಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೊಗಲಾಗಿತ್ತು.

Edited By : Nirmala Aralikatti
PublicNext

PublicNext

21/10/2021 12:40 pm

Cinque Terre

57.76 K

Cinque Terre

3

ಸಂಬಂಧಿತ ಸುದ್ದಿ