ಮುಂಬೈ : ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಭೇಟಿಯಾಗಲು ಇಂದು ಮುಂಬೈನ ಆರ್ಥರ್ ರೋಡ್ ಜೈಲಿಗೆ ಕಿಂಗ್ ಖಾನ್ ಆಗಮಿಸಿದ್ದರು.
ಮಗನ ಬಂಧನದ ಮೊದಲ ಭೇಟಿ ಇದಾಗಿದೆ. ಕೋವಿಡ್-19 ಮಧ್ಯೆ ಮಹಾರಾಷ್ಟ್ರ ಸರ್ಕಾರ ಜೈಲಿನಲ್ಲಿರುವವರನ್ನು ಭೇಟಿಯಾಗದೇ ಇರುವಂತೆ ನಿರ್ಬಂಧ ಹೇರಿತ್ತು. ಇದೀಗ ಈ ನಿರ್ಬಂಧಗಳನ್ನು ಸಡಿಲಗೊಳಿಸಿದ ಬಳಿಕ ಶಾರೂಖ್ ಮಗನನ್ನು ಭೇಟಿಯಾಗಿ ಸುಮಾರು 20 ನಿಮಿಷಗಳ ಕಾಲ ಮಾತನಾಡಿದ್ದಾರೆ.
ಈವರೆಗೂ ಎರಡು ಬಾರಿ ಆರ್ಯನ್ ಖಾನ್ ಗೆ ಜಾಮೀನನ್ನು ನಿರಾಕರಿಸಲಾಗಿದ್ದು, ಇದೀಗ ಬಾಂಬೆ ಹೈಕೋರ್ಟ್ ನ್ನು ಸಂಪರ್ಕಿಸಲಾಗಿದೆ.
PublicNext
21/10/2021 12:26 pm