ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋ ಯೋ ಹನಿ ಸಿಂಗ್ ವೈವಾಹಿಕ ದೌರ್ಜನ್ಯದ ಆರೋಪ: ಗೌಪ್ಯ ವಿಚಾರಣೆಗೆ ಹೈಕೋರ್ಟ್ ಅನುಮತಿ

ನವದೆಹಲಿ: ಬಾಲಿವುಡ್ ನ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಯೋ ಯೋ ಹನಿ ಸಿಂಗ್ ವೈವಾಹಿಕ ದೌರ್ಜನ್ಯದ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಹನಿಸಿಂಗ್ ತಮ್ಮ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಗೌಪ್ಯವಾಗಿಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಗೆ ಕೋರ್ಟ್ ಶುಕ್ರವಾರ ಸಮ್ಮತಿ ಸೂಚಿಸಿದೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತಾನಿಯಾ ಸಿಂಗ್ ಅವರು ಹನಿ ಸಿಂಗ್ ಹಾಗೂ ಅವರ ಪತ್ನಿ ಶಾಲಿನಿ ತಲ್ವಾರ್ ಅವರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ದೀರ್ಘ ಕಾಲದವರೆಗೆ ವಿಚಾರಣೆ ನಡೆಸಿದರು. ಶಾಲಿನಿ ತಲ್ವಾರ್ ಅವರು ತಮ್ಮ ಗಂಡ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ ಮತ್ತು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಹನಿ ಸಿಂಗ್ ಅವರಿಂದ 20 ಕೋಟಿ ಪರಿಹಾರವನ್ನು ಕೋರಿದ್ದಾರೆ.

2011 ಜನವರಿ 23 ರಂದು ಹನಿ ಸಿಂಗ್ ಮತ್ತು ಶಾಲಿನಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಶಾಲಿನಿ ಪರ ವಕೀಲ ಸಂದೀಪ್ ಕಪೂರ್ ಮತ್ತು ಹನಿ ಸಿಂಗ್ ಪರ ರೆಬೆಕಾ ಜಾನ್ ನ್ಯಾಯಾಲಯದಲ್ಲಿ ಹಾಜರಿದ್ದರು.

Edited By : Nirmala Aralikatti
PublicNext

PublicNext

03/09/2021 05:01 pm

Cinque Terre

99.7 K

Cinque Terre

0

ಸಂಬಂಧಿತ ಸುದ್ದಿ