ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಮೀನು ಸಿಕ್ಕಿ 2 ದಿನಗಳ ಬಳಿಕ ರಾಗಿಣಿ ರಿಲೀಸ್

ಬೆಂಗಳೂರು: ಸ್ಯಾಂಡಲ್ ವು ಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ರಾಗಿಣಿಗೆ ಸುಪ್ರೀಂ ಜಾಮೀನು ಮಂಜೂರು ಮಾಡಿದ ಎರಡು ದಿನಗಳ ಬಳಿಕ ಅಂದ್ರೆ ಇಂದು ಮಧ್ಯಾಹ್ನ ಪರಪ್ಪನ ಅಗ್ರಾಹಾರ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

140 ದಿನಗಳ ಬಳಿಕ ನಟಿ ರಾಗಿಣಿ ದ್ವಿವೇದಿಗೆ ಗುರುವಾರ ಜಾಮೀನು ಮಂಜೂರಾಗಿದೆ. ಬೇಲ್ ಸಿಕ್ಕ ಎರಡು ದಿನಗಳ ಬಳಿಕ ಜೈಲಿನಿಂದ ರಿಲೀಸ್ ಭಾಗ್ಯ ದೊರೆಯಲಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಸೆಪ್ಟೆಂಬರ್ 4 ರಂದು ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ನಟಿ ಸಂಜನಾ ಗಲ್ರಾನಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ರಾಗಿಣಿಗೆ ಇದೀಗ ಬರೋಬ್ಬರಿ 140 ದಿನಗಳ ಬಳಿಕ ರಾಗಿಣಿಗೂ ಜಾಮೀನು ಸಿಕ್ಕಿದೆ. ಸುದೀರ್ಘ ವಿಚಾರಣೆ ನಡೆಸಿದ ನ್ಯಾ.ರೊಹಿಂಟನ್ ನಾರಿಮನ್ ತ್ರೀ ಸದಸ್ಯ ಪೀಠ ಜಾಮೀನು ನೀಡಿ ಆದೇಶಿಸಿದೆ.

Edited By : Nirmala Aralikatti
PublicNext

PublicNext

23/01/2021 10:58 am

Cinque Terre

103.58 K

Cinque Terre

0

ಸಂಬಂಧಿತ ಸುದ್ದಿ