ಬೆಂಗಳೂರು : ಮಾಡಬಾರದನ್ನು ಮಾಡಿದರೆ ಆಗಬಾರದೇ ಆಗುತ್ತದೆ ಎನ್ನುವುದಕ್ಕೆ ಈ ಖ್ಯಾತ ನಟಿಮಣಿಯರೇ ಸಾಕ್ಷಿ ಎಂದರೆ ತಪ್ಪಾಗಲಾರದು.
ಸಧ್ಯ ಜೈಲೂಟ ಸವಿಯುತ್ತಿರುವ ಜೈಲು ಹಕ್ಕಿಗಳಾದ ಸಂಜನಾ ಮತ್ತು ರಾಗಿಣಿಗೆ ಜಾಮೀನು ಸಿಗುವ ಹಾಗೆ ಕಾಣುತ್ತಿಲ್ಲ.
ಒಂದಿಲ್ಲೊಂದು ಕಾರಣದಿಂದ ಇವರ ಜಾಮೀನು ಅರ್ಜಿ ವಿಚಾರಣೆ ದಿನದಿಂದ ದಿನಕ್ಕೇ ಮುಂದೂಡಲಾಗುತ್ತಿದೆ.
ಡ್ರಗ್ಸ್ ಪ್ರಕರಣದಡಿ ಪರಪ್ಪನ ಅಗ್ರಹಾರ ಸೇರಿರುವ ನಟಿಮಣಿಯರ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಸೋಮವಾರ ಆದೇಶ ಪ್ರಕಟಿಸಲಿದೆ.
ಸೋಮವಾರ ಅವರಿಗೆ ಜಾಮೀನು ಸಿಗಲಿದೆಯಾ ಅಥವಾ ಸೆರೆವಾಸ ಮುಂದುವರೆಯಲಿದೆಯಾ ಎಂಬುದು ನಿರ್ಧಾರವಾಗಲಿದೆ.
ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಿರುವ ಎನ್ ಡಿಪಿಎಸ್ ನ್ಯಾಯಾಲಯ ಇಬ್ಬರ ಜಾಮೀನು ಅರ್ಜಿ ಕುರಿತಾಗಿ ಸೋಮವಾರ ಆದೇಶ ಪ್ರಕಟಿಸಲಿದೆ.
ಜಾರಿ ನಿರ್ದೇಶನಾಲಯ ಕೂಡ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಐದು ದಿನಗಳ ಕಾಲ ಜಾರಿ ನಿರ್ದೇಶನಾಲಯ ಕೂಡ ಅವರ ವಿಚಾರಣೆ ಆರಂಭಿಸಿದೆ.
ಸದ್ಯಕ್ಕೆ ಇವರ ಪಾಲಿಗೆ ಪರಪ್ಪನ ಅಗ್ರಹಾರವೇ ತವರು ಮನೆಯಂತಾಗಿದೆ.
PublicNext
26/09/2020 07:58 am