ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್ ಜಾಡು ಮಸ್ತಾನಿಗೆ ಎನ್ ಸಿಬಿ ನೋಟಿಸ್? ಕಿಕ್ ನಲ್ಲಿ ಕಮಾಲ್ ಮಾಡತ್ತಿದ್ರಾ ಬಿಟೌನ್ ಪದ್ಮಾವತಿ

ಮುಂಬೈ: ಬಗೆದಷ್ಟು ಆಳ ವಾಗುತ್ತಿದೆ ಡ್ರಗ್ಸ್ ಹಗರಣದ ತನಿಖೆ.

ಸಧ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಬೆಡಗಿ, ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಹೆಸರು ಕೇಳಿ ಬಂದಿದ್ದು ಎನ್ ಸಿಬಿ ಸಮನ್ಸ್ ನೀಡುವ ಸಾಧ್ಯತೆಗಳಿವೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಡ್ರಗ್ಸ್ ಖರೀದಿಗಾಗಿ ದೀಪಿಕಾ ಮಾಡಿರುವ ವಾಟ್ಸಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಗಳು ರಿವೀಲ್ ಆಗಿವೆ.

ಜಯ್ ಸಾಹಾ ಮತ್ತು ಖಾಸಗಿ ಕಂಪನಿಯ ಮ್ಯಾನೇಜರ್ ಕರೀಷ್ಮಾ ಎಂಬವರ ಜೊತೆಗಿನ ವಾಟ್ಸಪ್ ಚಾಟ್ ನಶೆ ದಾರಿಯ ಸುಳಿವು ನೀಡಿದೆ.

ವಾಟ್ಸಪ್ ಚಾಟ್ ನಲ್ಲಿ ಡಿ ಮತ್ತು ಕೆ ಎಂಬ ಕೋಡ್ ವರ್ಡ್ ಗಳನ್ನು ಬಳಕೆ ಮಾಡಲಾಗಿದೆ.

ಡಿ ಅಂದ್ರೆ ದೀಪಿಕಾ ಪಡುಕೋಣೆ ಮತ್ತು ಕೆ ಅಂದ್ರೆ ಕರೀಷ್ಮಾ ಎಂದು ಖಾಸಗಿ ವಾಹಿನಿ ತಿಳಿಸಿದೆ.

ಈ ವಾಟ್ಸಪ್ ಚಾಟ್ ನಲ್ಲಿ ಅಮಿತ್ ಮತ್ತು ಶಾಲ್ ಎಂಬ ಹೆಸರುಗಳು ರಿವೀಲ್ ಆಗಿದ್ದು, ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಹೀಗಿದೆ ನೋಡಿ ವಾಟ್ಸಪ್ ಸಂಭಾಷಣೆ:

ದೀಪಿಕಾ: ನಿಮ್ಮ ಬಳಿ ಮಾಲ್ ಇದೆಯಾ?

ಕರೀಷ್ಮಾ: ಇದೆ, ಆದ್ರೆ ಮನೆಯಲ್ಲಿದೆ. ಆದ್ರೆ ನಾನು ಬಾಂದ್ರಾದಲ್ಲಿದ್ದೇನೆ.

ದೀಪಿಕಾ: ಯೆಸ್, ಪ್ಲೀಸ್

ಕರೀಷ್ಮಾ: ಅಮಿತ್ ಬಳಿ ಇದೆ. ಅವನು ಅದನ್ನು ತೆಗೆದುಕೊಂಡು ಹೋಗುತ್ತಿದ್ದಾನೆ.

ದೀಪಿಕಾ: ಹ್ಯಾಶ್ ತಾನೇ? ವೀಡ್ ಅಲ್ಲವಲ್ಲಾ?

ಕರೀಷ್ಮಾ: ಹ್ಯಾಶ್ ಅಲ್ಲ, ಗಾಂಜಾ ಇದೆ. ಬೇಕಾದ್ರೆ ಅಮಿತ್ ಗೆ ಹೇಳುತ್ತೇನೆ.

ಚಾಟ್ ರಿವೀಲ್ ಬಳಿಕ ದೀಪಿಕಾ ಪಡುಕೋಣೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದೇ ರೀತಿ ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ನಡೆಸಿರುವ ವಾಟ್ಸಪ್ ಸಂಭಾಷಣೆಯ ಮಾಹಿತಿ ರಿವೀಲ್ ಆಗಿದೆ.

ಇನ್ನು ಬಂಧನದಲ್ಲಿರುವ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುವ 25 ಸೆಲೆಬ್ರಿಟಿಗಳ ಹೆಸರು ಹೇಳಿದ್ದಾರೆ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

22/09/2020 10:08 am

Cinque Terre

92.35 K

Cinque Terre

2