ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಚಾಲದ ನಂಟಿನ ಆರೋಪದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ರಾಗಿಣಿ, ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಸೆ.19ರಂದು ನಡೆದ ವಿಚಾರಣೆ ವೇಳೆ ಸಿಸಿಬಿ ಪರ ವಕೀಲರು, ಸಂಜನಾ ಗಲ್ರಾನಿ ಜಾಮೀನು ಅರ್ಜಿಗೆ ಅಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರಿದ್ದರು.
ಉಳಿದ ಎಲ್ಲ ಆರೋಪಿಗಳ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿದ್ದ ಇರುವುದಾಗಿ ಹೇಳಿದ್ದರು.
ಆಗ ನ್ಯಾಯಾಲಯ ಒಂದೇ ಕೇಸಿನಲ್ಲಿ ಎಲ್ಲ ಆರೋಪಿಗಳು ಬಂಧನಕ್ಕೆ ಒಳಗಾದ ಕಾರಣ ಒಂದೇ ಆಕ್ಷೇಪಣೆ ಸಲ್ಲಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿತ್ತು.
ಸಿಸಿಬಿ ಪರ ವಕೀಲರು ಸಲ್ಲಿಸುವ ಆಕ್ಷೇಪಣೆ ಮೇರೆಗೆ ಆರೋಪಿಗಳ ಪರ ವಕೀಲರು ವಾದ ಮಂಡಿಸಲಿದ್ದು, ವಾದ-ಪ್ರತಿವಾದ ಆಲಿಸುವ ಕೋರ್ಟ್ ಜಾಮೀನು ಅರ್ಜಿಗೆ ನೀಡುವ ತೀರ್ಪು ಏನೆಂಬುದು ಕಾದುನೋಡಬೇಕಾಗಿದೆ.
PublicNext
21/09/2020 11:07 am