ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡ್ರಗ್ಸ್ ಜಾಡು : 4 ಬಾಲಿವುಡ್ ಸ್ಟಾರ್ ನಟರ ಹೆಸರು ತಳಕು

ಮುಂಬೈ : ಇಷ್ಟು ದಿನ ಡ್ರಗ್ಸ್ ಜಾಲದಲ್ಲಿ ನಟಿಯರ ಹೆಸರು ಕೇಳಿ ಬಂದಿತ್ತು. ಇನ್ನೂ ಅದೇಷ್ಟು ಮಹಾನ್ ಪ್ರತಿಭೆಗಳ ಹೆಸರು ಕೇಳಿ ಬರುತ್ತದೆಯೋ ಗೊತ್ತಿಲ್ಲ

ಸದ್ಯ ಬಾಲಿವುಡ್ ನಟರಾದ ಶಾರೂಖ್ ಖಾನ್, ಅರ್ಜುನ್ ರಾಂಪಾಲ್, ರಣ್ಬೀರ್ ಕಪೂರ್ ಮತ್ತು ಡಿನೋ ಮೊರಿಯಾ ಹೆಸರು ಕೇಳಿ ಬಂದಿದೆ.

ಖಾಸಗಿ ವಾಹಿನಿಯೊಂದು ನಾಲ್ವರ ಹೆಸರುಗಳನ್ನು ಖಚಿತಪಡಿಸಿ ವರದಿ ಬಿತ್ತರಿಸಿದೆ.

ಹೆಸರು ಹೇಳಲು ಇಚ್ಛಿಸದ ಎನ್ ಸಿಬಿ ಅಧಿಕಾರಿಯೊಬ್ಬರು ಈ ನಾಲ್ವರ ಹೆಸರನ್ನ ರಿವೀಲ್ ಮಾಡಿದ್ದಾರೆ.

ಕಳೆದ ಎರಡು ದಿನಗಳಿಂದ ರಾಷ್ಟ್ರೀಯ ಖಾಸಗಿ ಮಾಧ್ಯಮಗಳು ಎಸ್, ಎ, ಆರ್ ಮತ್ತು ಡಿ ಹೆಸರಿನ ಸ್ಟಾರ್ ಗಳು ಡ್ರಗ್ಸ್ ಸೇವನೆ ಮಾಡುತ್ತಿದ್ದಾರೆ ಎಂದು ಪ್ರಕಟಿಸಿದ್ದವು.

ಇದೀಗ ಮತ್ತೊಂದು ವಾಹಿನಿ ಎನ್ ಸಿಬಿ ಹೇಳಿಕೆಯನ್ನಾಧರಿಸಿಯೇ ಈ ನಾಲ್ವರ ಹೆಸರನ್ನು ಬಹಿರಂಗಪಡಿಸಿದ್ದೇವೆ ಎಂದು ತಿಳಿಸಿದೆ.

ಎನ್ ಸಿಬಿ ಅಧಿಕಾರಿ ಜೊತೆ ನಡೆಸಿದ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ತಮ್ಮ ಬಳಿಯಲ್ಲಿದೆ ಎಂದು ಖಾಸಗಿ ವಾಹಿನಿ ಹೇಳಿದೆ.

ಈ ನಾಲ್ವರ ಹೆಸರನ್ನು ಬಂಧಿತ ಡ್ರಗ್ಸ್ ಪೆಡ್ಲರ್ ಹೇಳಿದ್ದಾನೆ.

ಆದ್ರೆ ಈ ನಾಲ್ವರು ಡ್ರಗ್ಸ್ ಸೇವನೆ ಮಾಡ್ತೀದ್ದೀರಾ ಅಥವಾ ಪೂರೈಕೆದಾರರಾಗಿದ್ದಾರೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ ಎನ್ನಲಾಗಿದೆ.

Edited By : Nirmala Aralikatti
PublicNext

PublicNext

01/10/2020 08:59 am

Cinque Terre

126.88 K

Cinque Terre

1

ಸಂಬಂಧಿತ ಸುದ್ದಿ