ಬೆಂಗಳೂರು : ತಾರಾಂಗಳದ ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಡ್ರಗ್ಸ್ ಜಾಲದಲ್ಲಿ ನಟಿ ರಾಗಿಣಿ ದ್ವಿವೇದಿ ಇದರ ಬೆನ್ನಲ್ಲೇ ನಟಿ ಸಂಜನಾ ಕೂಡ ಜೈಲು ಪಾಲಾಗಿದ್ದು ಆಗಿದ್ದು, ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ಪ್ರಕರಣದ ಕುರಿತು ವಿಚಾರಣೆ ನಡೆಸಲಿರುವ ಎನ್ಡಿಪಿಎಸ್ ನ್ಯಾಯಾಲಯವೂ ಇಬ್ಬರ ಜಾಮೀನು ಅರ್ಜಿ ಕುರಿತಾಗಿ ಆದೇಶ ನಡೆಸಲಿದ್ದು, ನಟಿ ರಾಗಿಣಿ ದ್ವಿವೇದಿ ಹಾಗೂ ನಟಿ ಸಂಜನಾ ಇಬ್ಬರು ನಟಿಯರಿಗೆ ಜಾಮೀನು ಸಿಗಲಿದೆಯಾ ಅಥವಾ ಜೈಲುವಾಸವೇ ಮುಂದುವರೆಯಲಿದೆಯಾ ಎಂಬುದು ನಿರ್ಧಾರವಾಗಲಿದೆ.
ಈಗಾಗಲೇ ಜಾರಿ ನಿರ್ದೇಶನಾಲಯವೂ ಸಂಜನಾ ಮತ್ತು ರಾಗಿಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲೇ ನಟಿಯರಿಬ್ಬರ ವಿಚಾರಣೆ ನಡೆಸುತ್ತಿದ್ದು, ಸಿಸಿಬಿ ವಿಚಾರಣೆಯಿಂದಲೇ ಸಾಕಾಗಿ ಹೋಗಿದ್ದ ನಟಿಯರು ಜೈಲಿನಲ್ಲಾದರೂ ಯಾವುದೇ ವಿಚಾರಣೆ ಇಲ್ಲದೆ ನೆಮ್ಮದಿಯಿಂದಿರಬಹುದು ಎಂದುಕೊಂಡಿದ್ದ ಇವರಿಗೆ ಇಡಿ ಶಾಕ್ ನೀಡಿದೆ. ಸಿಸಿಬಿ ಪೊಲೀಸರೊಂದಿಗೆ ಇಡಿ ಅಧಿಕಾರಿಗಳು ಕೂಡ ಇನ್ನೂ ಎರಡು ದಿನಗಳ ಕಾಲ ವಿಚಾರಣೆ ಮುಂದುವರಿಸಲಿದೆ ಎನ್ನಲಾಗಿದೆ.
PublicNext
28/09/2020 08:34 am