ಡ್ರಗ್ಸ್ ಜಾಡು ಬೆನ್ನತ್ತಿದ್ದ ಎನ್ ಸಿಬಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್, ರಾಕುಲ್ ಪ್ರೀತ್ ನನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಬಾಲಿವುಡ್ ನಟಿಯರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ತಿಳಿಸಿದೆ.
ಅಲ್ಲದೆ ಕರಿಷ್ಮಾ ಪ್ರಕಾಶ್, ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್, ಸಿಮೋನೆ ಕಂಬಟ್ಟ ಮತ್ತು ಜಯ ಷಾ ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಅಧಿಕಾರಿ ತಿಳಿಸಿದ್ದಾರೆ.
ಎನ್ಸಿಬಿ ಮೂಲಗಳ ಪ್ರಕಾರ.. ತನಿಖೆ ವೇಳೆ ದೀಪಿಕಾ ತಮ್ಮ ಮತ್ತು ಕರೀಷ್ಮಾ ನಡುವಿನ ವಾಟ್ಸ್ಆಯಪ್ ಚಾಟ್ ಬಗ್ಗೆ ಒಪ್ಪಿಕೊಂಡಿದ್ದಾರಂತೆ, ದೀಪಿಕಾ ಪಡುಕೋಣೆಯವರೂ ಕೂಡ ತಾವು ಡ್ರಗ್ಸ್ಗೆ ಸಂಬಂಧಪಟ್ಟಂತೆ 2017ರಲ್ಲಿ ಕರಿಷ್ಮಾ ಜತೆಗೆ ಚಾಟ್ ಮಾಡಿರುವುದು ಸತ್ಯ ಎಂದು ಎನ್ಸಿಬಿ ಎದುರು ಒಪ್ಪಿಕೊಂಡಿದ್ದು, ಆದರೆ ದೀಪಿಕಾ ಇನ್ನುಳಿದ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡದ ಹಿನ್ನೆಲೆ ಎನ್‍ಸಿಬಿ ಅಧಿಕಾರಿಗಳು ಅವರ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಇನ್ನು ಸಾರಾ ಅಲಿ ಖಾನ್, ಸುಶಾಂತ್ ಜೊತೆಯಲ್ಲಿ ಸ್ಮೋಕ್ ಮಾಡಿದ್ದೇನೆಯೇ ಹೊರತು ಡ್ರಗ್ಸ್ ಸೇವನೆ ಮಾಡಿಲ್ಲ, ಕೇದಾರನಾಥ್ ಸಿನಿಮಾದಿಂದಾಗಿ ನಮ್ಮಿಬ್ಬರ ಮಧ್ಯೆ ಒಳ್ಳೆಯ ಸ್ನೇಹವಿತ್ತು, ಸುಶಾಂತ್ ಆತನ ಜೊತೆ ಪಾರ್ಟಿಗಳಲ್ಲಿ ಭಾಗಿಯಾಗಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಆರು ಗಂಟೆಯ ವಿಚಾರಣೆ ಗಂಟೆಗಳ ಕಾಲ ವಿಚಾರಣೆ ನಡೆಸಿದರು ಶ್ರದ್ಧಾ ಕಪೂರ್ ನೀಡಿರುವ ಉತ್ತರಗಳಲ್ಲಿ ತನಿಖಾಧಿಕಾರಿಗಳಿಗೆ ಸ್ಪಷ್ಟತೆ ಲಭ್ಯವಾಗಿಲ್ಲ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
PublicNext
27/09/2020 12:21 pm