ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ರಿಯಾಗೆ ಜೈಲೇ ಗತಿ ಅ. 6 ರವರೆಗೆ ನ್ಯಾಯಾಂಗ ಬಂಧನ ಮುಂದುವರಿಕೆ

ಮುಂಬೈ: ಈಗಾಗಲೇ ಮುಂಬೈನ ಬೈಖುಲ್ಲಾ ಜೈಲಿನಲ್ಲಿರುವ ರಿಯಾ ಸೆರೆವಾಸ ಅ.6ರವರೆಗೆ ಮುಂದುವರೆಯಲಿದೆ ಎಂದು ವಿಶೇಷ ಎನ್ ಡಿಪಿಎಸ್ ನ್ಯಾಯಾಲಯವು ಆದೇಶಿಸಿದೆ.

ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್ ಇಂದು ಬಾಂಬೆ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದೆ.

"ರಿಯಾ ಮತ್ತು ಶೋಯಿಕ್ ಚಕ್ರವರ್ತಿ ಅವರು ಎನ್ ಡಿಪಿಎಸ್ ಪ್ರಕರಣದಲ್ಲಿ ಜಾಮೀನು ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ಗೆ ಸಲ್ಲಿಸಿದ್ದಾರೆ.

ಇದು ಸೆಪ್ಟೆಂಬರ್ 23 ರಂದು ವಿಚಾರಣೆಗೆ ಬರಲಿದೆ. ವಿಚಾರಣೆಯ ನಂತರ ಅರ್ಜಿಗಳ ವಿವರಗಳನ್ನು ಹಂಚಿಕೊಳ್ಳಲಾಗುವುದು" ಎಂದು ರಿಯಾ ಸೋದರನ ಪರ ವಕೀಲ ಸತೀಶ್ ಮನೆಶಿಂಧೆ ತಿಳಿಸಿದ್ದಾರೆ. .

ನಟಿ ರಿಯಾ ಚಕ್ರವರ್ತಿ ಅಕ್ಟೋಬರ್ 6ರ ತನಕ ಜೈಲಿನಲ್ಲೇ ದಿನಗಳಿಯುವಂತೆ ಮುಂಬೈ ನ್ಯಾಯಾಲಯ ಇಂದು ಹೇಳಿದೆ.

ರಿಯಾ ಅವರ ನ್ಯಾಯಾಂಗ ಕಸ್ಟಡಿ ಅವಧಿಯು ಇಂದಿಗೆ ಕೊನೆಯಾಗಿತ್ತು.

ಸುಶಾಂತ್ ಸಿಂಗ್ ರಾಜ್ ಪೂತ್ ಸಾವಿನ ತನಿಖೆಗೆ ನಂಟಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ರಿಯಾ ಚಕ್ರವರ್ತಿಯನ್ನು ಸೆಪ್ಟಂಬರ್ 9 ರಂದು ಬಂಧಿಸಲಾಗಿತ್ತು.

Edited By : Nirmala Aralikatti
PublicNext

PublicNext

22/09/2020 03:45 pm

Cinque Terre

66.68 K

Cinque Terre

2

ಸಂಬಂಧಿತ ಸುದ್ದಿ