ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ಜತೆಗಿನ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಮ್ ಆ್ಯಂಕರ್ ಅನುಶ್ರೀ ಬಗ್ಗೆ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ.
ಸಿಸಿಬಿ ವಿಚಾರಣೆ ವೇಳೆ ಅನುಶ್ರೀ ಬಗ್ಗೆ ನಾಗಲ್ಯಾಂಡ್ ಮೂಲದ ಯುವತಿ ಆಸ್ಕಾ ಕೆಲವೊಂದು ಮಾಹಿತಿಯನ್ನು ಬಹಿರಂಗ ಗೊಳಿಸಿದ್ದಾರೆ.
ಹಾಗಿದ್ರೆ ಅಧಿಕಾರಿಗಳ ಮುಂದೆ ಆಸ್ಕಾ ಹೇಳಿದ್ದೇನು ಅಂದ್ರೆ ಅನುಶ್ರೀ ಮಂಗಳೂರಿಗೆ ಬಂದಾಗ ನನ್ನ ಫ್ಲ್ಯಾಟ್ ಗೆ ಬರ್ತಿದ್ಲು ಎಂದು ಹೇಳಿದ್ದಾ.
ಆಸ್ಕಾ ಡ್ರಗ್ಸ್ ಕೇಸ್ ಆರೋಪಿ ಕಿಶೋರ್ ಗರ್ಲ್ ಫ್ರೆಂಡ್ ಮಂಗಳೂರು ಹೊರವಲಯದ ಕುಂಟಿಕಾನದಲ್ಲಿರೋ ಗ್ಲೋಬಲ್ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ನಂ. 103ಗೆ ಅನುಶ್ರೀ ಬರ್ತಿದ್ಲು.
ನನಗೂ ಅನುಶ್ರೀಗೂ ಪರಿಚಯವಿದೆ ಎಂಬ ಮಾಹಿತಿ ಹೊರ ಹಾಕಿದ್ದಾಳೆ.
PublicNext
08/10/2020 01:43 pm