ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿ ಮೇಲೆ ಹಲ್ಲೆ ನಡೆಸಿದ ಎಡಿಜಿ : ವಿಡಿಯೊ ವೈರಲ್

ಭೋಪಾಲ್ : ಪುರುಷೋತ್ತಮ್ ಶರ್ಮಾ ಮಧ್ಯಪ್ರದೇಶದ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಅವರು ಪತ್ನಿ ಮೇಲೆ ನಡೆಸಿರುವ ಹಲ್ಲೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ ಶರ್ಮಾ ಅವರನ್ನು ಮಧ್ಯಪ್ರದೇಶ ಸರ್ಕಾರ ಕೆಲಸದಿಂದ ವಜಾಗೊಳಿಸಿದೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶರ್ಮಾ, ನಾನು ಆಕೆಯ ಮೇಲೆ ದೌರ್ಜನ್ಯವೆಸಗಿದ್ದರೆ ಆಕೆ ದೂರು ನೀಡಬೇಕಿತ್ತು.

ಇದು ಕೌಟುಂಬಿಕ ಕಲಹ, ಅಪರಾಧ ಅಲ್ಲ. ನಾನು ಹಿಂಸಾತ್ಮಕ ಪ್ರವೃತ್ತಿಯ ವ್ಯಕ್ತಿ ಅಥವಾ ಅಪರಾಧಿ ಅಲ್ಲ.

ಈ ರೀತಿ ನಡೆದುಕೊಳ್ಳಬೇಕಾಗಿ ಬಂದಿದ್ದು ದುರದೃಷ್ಟಕರ.

ನಮ್ಮ ದಾಂಪತ್ಯಕ್ಕೆ 32 ವರ್ಷ. 2008ರಲ್ಲಿ ಆಕೆ ನನ್ನ ವಿರುದ್ಧ ದೂರು ನೀಡಿದ್ದಳು. ಹೀಗಿದ್ದರೂ 2008ರಿಂದ ಇಲ್ಲಿವರೆಗೆ ಆಕೆ ನನ್ನ ಮನೆಯಲ್ಲಿಯೇ ಇದ್ದಾಳೆ.

ಎಲ್ಲ ಸವಲತ್ತುಗಳನ್ನು ಬಳಸುತ್ತಾಳೆ ಮತ್ತು ನನ್ನದೇ ಖರ್ಚಿನಲ್ಲಿ ವಿದೇಶಕ್ಕೂ ಹೋಗುತ್ತಾಳೆ ಎಂದಿದ್ದಾರೆ.

ಶರ್ಮಾ ಅವರ ಕೃತ್ಯವನ್ನು ಮಹಿಳಾ ಹಕ್ಕುಗಳ ಕಾರ್ಯಕರ್ತೆಯರು ಖಂಡಿಸಿದ್ದಾರೆ.

Edited By : Nirmala Aralikatti
PublicNext

PublicNext

28/09/2020 05:11 pm

Cinque Terre

63.65 K

Cinque Terre

2

ಸಂಬಂಧಿತ ಸುದ್ದಿ