ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತ್ರಾಸ್ ಗ್ಯಾಂಗ್ ರೇಪ್ ಕೇಸ್: ಸಿಬಿಐನಿಂದ ತನಿಖೆ ಚುರುಕು

ಲಖನೌ : ದೇಶಾದ್ಯಂತ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿರುವ ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕೃತವಾಗಿ ತನಿಖಾ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಈ ಹಿಂದೆ ಹತ್ರಾಸ್ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ದಳ-ಸಿಬಿಐನಿಂದ ತನಿಖೆ ನಡೆಸಬೇಕೆಂದು ಉತ್ತರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ ಮನವಿ ಮಾಡಿತ್ತು.

ಈ ಸಂಬಂಧ ಮನವಿ ಪತ್ರ ಸಲ್ಲಿಸಿದ್ದ ಉತ್ತರ ಪ್ರದೇಶ ಸರ್ಕಾರ, ಈ ಪ್ರಕರಣದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ನಕಲಿ ಮತ್ತು ಸಂಗತಿಗಳನ್ನು ಸೃಷ್ಟಿಸಲು ಯಾವುದೇ ಆಸ್ಪದ ನೀಡುವುದಿಲ್ಲ.

ಈ ಘಟನೆ ಬಗ್ಗೆ ಸತ್ಯಾಂಶ ಹೊರಬರಬೇಕು. ಹೀಗಾಗಿ ಕೇಂದ್ರದ ಸ್ವತಂತ್ರ ತನಿಖಾ ಸಂಸ್ಥೆಯಿಂದಲೇ ಈ ಪ್ರಕರಣದ ತನಿಖೆ ನಡೆಸುವುದು ಸೂಕ್ತ ಎಂದು ಉತ್ತರಪ್ರದೇಶ ಸರ್ಕಾರ ಅಫಿಡೆವಿಟ್ ನಲ್ಲಿ ತಿಳಿಸಿತ್ತು.

ಇದೀಗ ಸ್ವತಃ ಸಿಬಿಐ ಅಧಿಕಾರಿಗಳು ಹತ್ರಾಸ್ ಪ್ರಕರಣವನ್ನು ಅಧಿಕೃತವಾಗಿ ತನಿಖೆಗೆ ಸ್ವೀಕರಿಸಿದ್ದಾರೆ.

Edited By : Nirmala Aralikatti
PublicNext

PublicNext

10/10/2020 10:41 pm

Cinque Terre

95.06 K

Cinque Terre

1