ಚಂಡೀಗಢ : 25 ವರ್ಷದ ಮಹಿಳೆ ಮೇಲೆ ನಾಲ್ವರು ಕಾಮುಕರು ಮೃಗದಂತೆ ಎರಗಿ ಕಾಮ ತೃಷೆ ತೀರಿದ ಬಳಿಕ ಆಕೆಯನ್ನು ಮನ ಬಂದಂತೆ ಥಳಿಸಿರುವ ಘಟನೆ ಗುರುಂಗಾವ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಈ ಹೇಯ ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ಅವರು 20 ರಿಂದ 25 ವರ್ಷದೊಳಗಿನವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಗುರುಗ್ರಾಮದ ಡಿಎಲ್ಎಫ್ 2ನೇ ಹಂತದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಡಿಎಲ್ಎಫ್ ನ ಸಹಾಯಕ ಪೊಲೀಸ್ ಆಯುಕ್ತ ಕರಣ್ ಗೋಯಲ್ ದೂರವಾಣಿ ಮೂಲಕ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ, ಅವರಲ್ಲಿ ಮೂವರು ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ನಾಲ್ವರು ಆರೋಪಿಗಳಲ್ಲಿ ಒಬ್ಬ ಗುರುಗ್ರಾಮದ ಸಿಕಂದರ್ ಪುರ ಮೆಟ್ರೋ ನಿಲ್ದಾಣದ ಬಳಿ ಶನಿವಾರ ರಾತ್ರಿ ಮಹಿಳೆಯನ್ನು ಭೇಟಿಯಾಗಿ, ತಾನು ಕೆಲಸ ಮಾಡುತ್ತಿದ್ದ ರಿಯಲ್ಎಸ್ಟೇಟ್ ಕಚೇರಿಗೆ ಕರೆದೊಯ್ದಿದ್ದ. ನಂತರ ಅಲ್ಲಿ ನಾಲ್ವರೂ ಕೂಡಿಕೊಂಡು ಅತ್ಯಾಚಾರ ಮಾಡಿದ್ದಾರೆ.
ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ಪ್ರತಿರೋಧಿಸಿದಾಗ ಆಕೆಯ ತಲೆಯನ್ನು ಗೋಡೆಗೆ ಗುದ್ದಿದ್ದಾನೆ,ತೀವ್ರವಾದ ಗಾಯಗಳಿಂದ ಆಕೆಯನ್ನು ಗುರುಂಗಾವ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
05/10/2020 10:22 am