ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ : ಸರಣಿ ಸ್ಫೋಟಕ್ಕೆ 8 ಬಲಿ

ಕೈವ್ : ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ. ರಾಜಧಾನಿ ಕೈವ್ ಸೇರಿದಂತೆ ಹಲವು ನಗರಗಳ ಮೇಲೆ ದಾಳಿ ನಡೆಸುತ್ತಿದೆ.ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆಯ ಮೇಲೆ ನಡೆದ ಭಾರೀ ಸ್ಫೋಟಕ್ಕೆ ಮಾಸ್ಕೋ, ಉಕ್ರೇನ್ ಅನ್ನು ದೂಷಿಸಿದ ಒಂದು ದಿನದ ನಂತರ ಸೋಮವಾರ ಮುಂಜಾನೆ ಉಕ್ರೇನ್ ರಾಜಧಾನಿ ಕೈವ್ ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ.

ನಮ್ಮ ದೇಶದ ಹಲವು ನಗರಗಳಲ್ಲಿ ದಾಳಿ ಬಗ್ಗೆ ಮಾಹಿತಿ ಇದೆ ಎಂದು ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕೈರಿಲೋ ಟಿಮೊಶೆಂಕೊ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಅದೇ ವೇಳೆ ಜನರು ದಾಳಿಯಿಂದ ರಕ್ಷಣೆ ಪಡೆಯಲು ಆಶ್ರಯತಾಣದಲ್ಲೇ ಇರಿ ಎಂದು ಜನರಿಗೆ ಕರೆ ನೀಡಿದ್ದಾರೆ.

ಸ್ಫೋಟಗಳು ಸ್ಥಳೀಯ ಸಮಯ (0515 GMT) 8:15 ರ ಸುಮಾರಿಗೆ ಕೈವ್ ಗೆ ಅಪ್ಪಳಿಸಿತು. ಸ್ಫೋಟದ ಸ್ಥಳದ ಕಡೆಗೆ ಹಲವಾರು ಆಂಬ್ಯುಲೆನ್ಸ್ ಗಳು ಹೋಗಿರುವುದಾಗಿ ಎಎಫ್ ಪಿ ಸುದ್ದಿಸಂಸ್ಥೆಯ ಪತ್ರಕರ್ತರೊಬ್ಬರು ಹೇಳಿದ್ದಾರೆ. ಇನ್ನು ದಾಳಿಯಲ್ಲಿ 8 ಜನ ಸಾವನ್ನಪ್ಪಿದ್ದು 24 ಜನ ಗಾಯಗೊಂಡಿದ್ದಾರೆ.

Edited By : Nirmala Aralikatti
PublicNext

PublicNext

10/10/2022 02:55 pm

Cinque Terre

86.74 K

Cinque Terre

5