ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೊಂದು ಹಿಂದೂ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.ಹೌದು ಜೆನೈದಾದಲ್ಲಿರುವ ದೌತಿಯಾ ಗ್ರಾಮದ ಕಾಳಿ ದೇವಸ್ಥಾನದ ವಿಗ್ರಹವನ್ನು ತುಂಡಾಗಿ ಒಡೆದು ಹಾಕಿದ್ದಾರೆ. ಘಟನೆಗೆ ಸಂಬಂಧಿಸಿ ದೇವಸ್ಥಾನದಿಂದ ಅರ್ಧ ಕಿ.ಮೀ ದೂರದ ರಸ್ತೆಯೊಂದರಲ್ಲಿ ವಿಗ್ರಹದ ತಲೆಯನ್ನು ಎಸೆದಿರುವುದು ಕಂಡುಬಂದಿದೆ.
ಈ ಕುರಿತು ದೇಗುಲ ಸಮಿತಿಯ ಅಧ್ಯಕ್ಷ ಸುಕುಮಾರ್ ಕುಂದಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಬಾಂಗ್ಲಾದೇಶದಲ್ಲಿ 10 ದಿನಗಳ ವಾರ್ಷಿಕ ದುರ್ಗಾ ಪೂಜೆ ಉತ್ಸವಗಳು ವಿಜಯದಶಮಿ ಮುಗಿದ ನಂತರ ಈ ಘಟನೆ ಸಂಭವಿಸಿದೆ.
ಬಾಂಗ್ಲಾ ದೇಶದಲ್ಲಿ ದೇವಸ್ಥಾನದ ಮೇಲೆ ದಾಳಿ ನಡೆದಿದ್ದು ಇದೇ ಮೊದಲಲ್ಲ. ಈ ವರ್ಷ ಮಾರ್ಚ್ 17 ರಂದು ಬಾಂಗ್ಲಾ ರಾಜಧಾನಿ ಢಾಕಾದ ಇಸ್ಕಾನ್ ರಾಧಾಕಾಂತ ಜೀವ್ ದೇವಾಲಯವನ್ನು ಧ್ವಂಸಗೊಳಿಸಿ, ವಿಗ್ರಹಗಳನ್ನು ತೆಗೆದುಕೊಂಡು ಹೋಗಿದ್ದರು.
PublicNext
08/10/2022 09:13 pm