ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದಲ್ಲಿ ಅದೆಷ್ಟೋ ಅಮಾಯಕರು ಪ್ರಾಣ ತೆತ್ತಿದ್ದಾರೆ. ಹೀಗೆ ಓರ್ವ ಬಾಲಕಿ ಮದ್ಯ ಸೇವಿಸಿದ್ದ ರಷ್ಯಾದ ಸೈನಿಕರ ಕೃತ್ಯಕ್ಕೆ ಬಲಿಯಾಗಿದ್ದಾಳೆ.
ಉಕ್ರೇನ್ ರಾಜಧಾನಿ ಕೀವ್ ಸಮೀಪದ ಹಳ್ಳಿಯೊಂದರಲ್ಲಿ 10 ವರ್ಷದ ಬಾಲಕಿಯನ್ನು ಆಕೆಯ ಚಿಕ್ಕಪ್ಪನ ಮುಂದೆಯೇ ರಷ್ಯಾದ ಸೈನಿಕರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಬಾಲಕಿಯ ಕುಟುಂಬಸ್ಥರು ದೂರಿದ್ದಾರೆ. ಉಕ್ರೇನಿಯನ್ ಯುವಕನೋರ್ವ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಪರಿಣಾಮ ಮದ್ಯದ ಮತ್ತಿನಲ್ಲಿದ್ದ ರಷ್ಯಾದ ಸೈನಿಕರು ಏಕಾಏಕಿ ಗುಂಡಿನ ಮಳೆ ಸುರಿದರು. ಈ ವೇಳೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಬಾಲಕಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
PublicNext
09/03/2022 01:43 pm