ಗ್ರೇಟರ್ ನೊಯಿಡಾ - ಸಂಭ್ರಮಾಚರಣೆಯ ಪ್ರಯುಕ್ತ ಗುಂಡು ಹಾರಿಸಿ ಇಬ್ಬರು ಯುವಕರು ಅರೆಸ್ಟ್ ಆಗಿರುವ ಘಟನೆ ಗ್ರೇಟರ್ ನೊಯಿಡಾದಲ್ಲಿ ನಡೆದಿದೆ. ಇಲ್ಲಿನ ಬಿಸ್ರಾಖ್ ಏರಿಯಾದಲ್ಲಿ ರಾತ್ರಿ ಯುವಕರ ಗುಂಪೊಂದು ಹುಟ್ಟುಹಬ್ಬ ಆಚರಿಸಿದ್ದಾರೆ. ಕಾರ್ನ ಬಾನೆಟ್ ಮೇಲೆ ಕೇಕ್ ಕತ್ತರಿಸಿ ಸಂಭ್ರಮಿಸುವ ವೇಳೆ ಗಂಪಿನಲ್ಲಿದ್ದ ಒಬ್ಬ ಯುವಕ ಖುಷಿಗೆ ಗುಂಡು ಹಾರಿಸಿದ್ದಾನೆ.
ಈ ವೇಳೆ ಏರಿಯಾದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಸೆಲೆಬ್ರೇಷನ್ ವೇಳೆ ವೀಡಿಯೋ ಕೂಡಾ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪೊಲೀಸರ ಗಮನಕ್ಕೂ ಬಂದಿದೆ. ಸದ್ಯ ಇಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
PublicNext
18/12/2021 05:08 pm