ಕಾಬೂಲ್: ಅಪ್ಘಾನಿಸ್ತಾನದ ಪಂಜ್ ಶೀರ್ ಪ್ರಾಂತ್ಯದಲ್ಲಿ ತಾಲಿಬಾನಿಗಳ ಹಿಂಸಾಚಾರ ಈಗಲೂ ಮುಂದುವರೆದಿದೆ. ತಮ್ಮ ವಿರೋಧಿಗಳಾದ ನಾರ್ದನ್ ಅಲಯನ್ಸ್ ಯೋಧರು ದಿಟ್ಟ ಹೋರಾಟದ ನಡುವೆಯೂ ತಾಲಿಬಾನಿಗಳು ಪಂಜ್‌ಶೀರ್‌ಗೆ ನುಗ್ಗಿ ಅಲ್ಲಿನ ಯುವಕರನ್ನು ಗುಂಡಿಟ್ಟು ಕೊಲ್ಲುತ್ತಿದ್ದಾರೆ. ತಾಲಿಬಾನಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ.
ಇನ್ನು ಹಂಗಾಮಿ ಉಪಾಧ್ಯಕ್ಷ, ನಾರ್ದನ್ ಅಲಯನ್ಸ್ ಅನ್ನು ಮುನ್ನಡೆಸುತ್ತಿರುವ ಅಮರುಲ್ಲಾ ಸಲೇಹ್ ಸದ್ಯ ಪಂಜ್‌ಶೀರ್ ಅನ್ನು ತೊರೆದಿದ್ದಾರೆ. ಅಲ್ಲಿ ಸಿಕ್ಕ ಸಲೇಹ್ ಸಹೋದರ ರೋಹುಲ್ಲಾ ಸಲೇಹ್ ರನ್ನು ವಶಕ್ಕೆ ಪಡೆದ ತಾಲಿಬಾನಿಗಳು ಆತನಿಗೆ ತಾಲಿಬಾನಿಗಳು ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
PublicNext
10/09/2021 10:34 pm