ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಲಿನ ಟಾಯ್ಲೆಟ್ ನಲ್ಲಿ ಸುರಂಗ ಕೊರೆದು ಉಗ್ರರು ಎಸ್ಕೇಪ್: ವಿಡಿಯೋ ನೋಡಿ

ಜೆರುಸಲೇಂ(ಇಸ್ರೇಲ್): ಭಾರಿ ಬಿಗಿ ಭದ್ರತೆಯಲ್ಲಿದ್ದ ಒಟ್ಟು ಆರು ಜನ ಉಗ್ರರು ಜೈಲಿನಿಂದ ಅಚ್ಚರಿಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಚಮಚ ಮತ್ತು ಲೋಟದಿಂದ ಜೈಲಿನ ಟಾಯ್ಲೆಟ್ ನೆಲ ಅಗೆದು ಸುರಂಗ ತೋಡಿದ ಉಗ್ರರು ಅಲ್ಲಿಂದಲೇ ಪರಾರಿಯಾಗಿದ್ದಾರೆ.

ಬಂಧಿತರಾಗಿದ್ದ ಉಗ್ರರು ಜೈಲಿನಲ್ಲಿದ್ದ ತಮ್ಮ ಬಾತ್​ ರೂಂನ ನೆಲವನ್ನು ಅಗೆದು, ಗುಪ್ತ ಮಾರ್ಗ ಸಿದ್ದಪಡಿಸಿಕೊಂಡಿದ್ದರು. ಆ ಬಾತ್​ ರೂಂ ಕ್ಲೀನ್ ಮಾಡಲು ಬೇರೆ ಯಾರೂ ಬರುತ್ತಿರಲಿಲ್ಲವಾದ್ದರಿಂದ ಇವರು ಹಲವು ದಿನಗಳಿಂದ ನೆಲವನ್ನು ಅಗೆದಿದ್ದು ಯಾರಿಗೂ ಗೊತ್ತಾಗಿರಲಿಲ್ಲ.

ಬಾತ್​ ರೂಂನಿಂದ ಕೆಳಗೆ ಜೈಲಿನಿಂದ ಹೊರಗೆ ಸಂಪರ್ಕ ಕಲ್ಪಿಸುವ ಗೋಡೆಯಾಚೆ ಸಣ್ಣದಾದ ಕಂದಕ ಕೊರೆದ ಉಗ್ರರು ಅದರ ಮೂಲಕ ಜೈಲಿನಿಂದ ಹೊರಗೆ ಹೋಗಿದ್ದಾರೆ. ಉಗ್ರರ ಈ ಕೃತ್ಯದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Edited By : Nagesh Gaonkar
PublicNext

PublicNext

08/09/2021 10:10 pm

Cinque Terre

173.87 K

Cinque Terre

40

ಸಂಬಂಧಿತ ಸುದ್ದಿ