ಕಾಬೂಲ್: ನಗರದ ವಿಮಾನ ನಿಲ್ದಾಣದ ಬಳಿ ಭಾರಿ ಸ್ಫೋಟ ಸಂಭವಿಸಿದೆ. ಸ್ಪೋಟದಲ್ಲಿ ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಂಭವ ಇದೆ. ಇದು ಆತ್ಮಾಹುತಿ ದಾಳಿ ಎಂದು ಶಂಕಿಸಲಾಗಿದೆ.
ಪೆಂಟಗಾನ್ ವಕ್ತಾರ ಜಾನ್ ಕಿರ್ಬೆ ಅವರು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಸಾವು-ನೋವಿನ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಇದೇ ವೇಳೆ ಕಾಬೂಲ್ ನಿಂದ ಇಟಲಿ ಮಿಲಿಟರಿ ಪಡೆ ತನ್ನ ನಾಗರಿಕರನ್ನು ಕರೆದೊಯ್ಯುತ್ತಿತ್ತು. ಅದೇ ವಿಮಾನದ ಮೇಲೆ ಉಗ್ರರು ದಾಳಿ ನಡೆಸಲು ಯತ್ನಿಸಿದ್ದಾರೆ. ಘಟನೆಯಲ್ಲಿ ವಿಮಾನಕ್ಕೆ ಹಾನಿಯಾಗಿಲ್ಲ.
PublicNext
26/08/2021 08:15 pm