ಕಾಬೂಲ್ (ಅಪ್ಘಾನಿಸ್ತಾನ): ನಮ್ಮ ಆಡಳಿತದಲ್ಲಿ ಮಹಿಳೆಯರಿಗೆ ಗೌರವ ಹಾಗೂ ಎಲ್ಲ ಹಕ್ಕು ನೀಡುತ್ತೇವೆ ಎಂಬ ತಾಲಿಬಾನಿಗಳ ಭರವಸೆ ಕೇವಲ ಮಾತಿನಲ್ಲಷ್ಟೇ ಉಳಿದಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಅದಕ್ಕೀಗ ಸಾಕ್ಷಿಯೂ ಸಿಕ್ಕಿದೆ.
ಅಡುಗೆ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರನ್ನು ತಾಲಿಬಾನಿಗಳು ಬೆಂಕಿ ಹಚ್ಚಿ ಕೊಂದಿದ್ದಾರೆ. ಈ ಘಟನೆ ಇದೇ ವಾರ ಉತ್ತರ ಅಪ್ಘಾನ್ ನಲ್ಲಿ ನಡೆದಿದೆ ಎಂದು ಮಹಿಳಾ ಕಾರ್ಯಕರ್ತೆಯೊಬ್ಬರು ತಿಳಿಸಿದ್ದಾರೆ.
ಅಡುಗೆ ಮಾಡಿಕೊಡುವಂತೆ ಅಪ್ಘಾನ್ ಮಹಿಳೆಗೆ ತಾಲಿಬಾನಿಗಳು ತಾಕೀತು ಮಾಡಿದ್ದಾರೆ. ಆಕೆ ಅಡುಗೆ ಮಾಡಿಕೊಟ್ಟ ಮೇಲೆ ಅಡುಗೆ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಜೀವಂತವಾಗಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಅಪ್ಘಾನ್ ಮಾಜಿ ನ್ಯಾಯಾಧೀಶೆ ನಜ್ಲಾ ಅಯೌಬಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
PublicNext
22/08/2021 03:30 pm