ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಘಾನಿಸ್ತಾನದ ಭಾರತೀಯರಿಗೆ ಯಾವುದೇ ತೊಂದ್ರೆ ಕೊಡೋದಿಲ್ಲ ಎಂದ ತಾಲಿಬಾನಿಗಳು

ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯರಿಗಾಗಿ ತಾಲಿಬಾನ್ ವಕ್ತಾರರು ಭಾರಿ ನೆಮ್ಮದಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ನಮ್ಮಿಂದ ಯಾವುದೇ ಅಪಾಯ ಇಲ್ಲ ಎಂದು ತಾಲಿಬಾನ್ ಹೇಳಿದೆ. ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳನ್ನು ಗುರಿಯಾಗಿಸುವುದಿಲ್ಲ ಎಂದು ತಾಲಿಬಾನ್ ಭರವಸೆ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್ ವಕ್ತಾರ ಮೊಹಮ್ಮದ್ ಸುಹೇಲ್ ಶಾಹೀನ್, "ನಮ್ಮ ಕಡೆಯಿಂದ ಯಾವುದೇ ಬೆದರಿಕೆಯಿಲ್ಲ ಎಂದು ನಾವು ಭಾರತೀಯ ರಾಜತಾಂತ್ರಿಕರು ಮತ್ತು ರಾಯಭಾರ ಕಚೇರಿಗೆ ಭರವಸೆ ನೀಡಲು ಬಯಸುತ್ತೇವೆ. ನಾವು ದೂತಾವಾಸಗಳಿಗೆ ಬೆದರಿಕೆ ಹಾಕುವುದಿಲ್ಲ. ಇದನ್ನು ನಾವು ನಮ್ಮ ಹೇಳಿಕೆಯಲ್ಲಿ ಒಂದೇ ಸಲ ಅಲ್ಲ ಹಲವು ಬಾರಿ ಹೇಳಿದ್ದೇವೆ. ಮಾಧ್ಯಮಗಳಲ್ಲಿಯೂ ಕೂಡ ನಾವು ನಮ್ಮ ಭರವಸೆಯನ್ನು ನೀಡಿದ್ದೇವೆ" ಎಂದಿದ್ದಾರೆ.

Edited By : Nagaraj Tulugeri
PublicNext

PublicNext

14/08/2021 11:59 am

Cinque Terre

78.06 K

Cinque Terre

34