ಕಾಬೂಲ್: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ ಅಫ್ಘಾನ್‌ನ ಎರಡನೇ ಅತೀ ದೊಡ್ಡ ನಗರ ಕಂದಹಾರ್‌ನ್ನು ಕೂಡ ವಶಪಡಿಸಿಕೊಂಡಿದೆ.
ಈ ಬಗ್ಗೆ ಶುಕ್ರವಾರ ಸ್ವತಃ ತಾಲಿಬಾನ್ ಹೇಳಿಕೊಂಡಿದೆ. "ಕಂದಹಾರ್ ಅನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ನಗರದ ಹುತಾತ್ಮರ ಚೌಕವನ್ನು ಮುಜಾಹಿದ್ದೀನ್ ತಲುಪಿದೆ" ಎಂದು ತಾಲಿಬಾನ್ ವಕ್ತಾರ ಟ್ವೀಟ್ ಮಾಡಿದ್ದಾರೆ.
ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ಗುರುವಾರ ರಾಜಧಾನಿ ಕಾಬೂಲ್‌ಗೆ ಸಮೀಪದಲ್ಲಿಯೇ ಇರುವ ಘಜ್ನಿ ಪ್ರಾಂತ್ಯದ ರಾಜಧಾನಿಯನ್ನು ವಶಪಡಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ತತ್ತರಿಸಿ ಹೋಗಿರುವ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರ ಉಗ್ರರು ಹಿಂಸಾಕೃತ್ಯಗಳನ್ನು ನಿಲ್ಲಿಸಿದರೆ ಅಧಿಕಾರದಲ್ಲಿ ಸಹಭಾಗಿತ್ವ ನೀಡುವುದಾಗಿ ವಾಗ್ದಾನ ಮಾಡಿದೆ.
PublicNext
13/08/2021 09:37 am