ಇಸ್ತಾಂಬುಲ್: ಪಾಪಿ ಪತಿಯೊಬ್ಬ ಇನ್ಶೂರೆನ್ಸ್ ಹಣಕ್ಕಾಗಿ ಗರ್ಭಿಣಿ ಪತ್ನಿಯನ್ನು 1,000 ಅಡಿ ಎತ್ತರದ ಬಂಡೆ ಮೇಲಿಂದ ತಳ್ಳಿದ ಅಮಾನವೀಯ ಘಟನೆ ಟರ್ಕಿಯಲ್ಲಿ ನಡೆದಿದ್ದು, ಎರಡು ವರ್ಷಗಳ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.
ಹಕನ್ ಐಸಲ್ (40) ತನ್ನ ಪತ್ನಿ ಗರ್ಭಿಣಿ ಪತ್ನಿ ಸೆಮ್ರಾ ಐಸಲ್ (32) ಜೊತೆಗೆ 2018ರ ಜೂನ್‌ನಲ್ಲಿ ಪ್ರವಾಸಕ್ಕೆ ತೆರಳಿದ್ದ. ಈ ವೇಳೆ ಇಬ್ಬರು ಎತ್ತರ ಬೆಟ್ಟದ ಮೇಲೆ ಹೋಗಿ ಸೆಲ್ಫಿ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದರು. ಆದರೆ ಅಲ್ಲಿ ಕಾಲು ಜಾರಿ ಪತ್ನಿ 1,000 ಅಡಿ ಎತ್ತರದ ಮೇಲಿಂದ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದ. ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರಿಗೆ ಎರಡು ವರ್ಷದ ಬಳಿಕ ಪಾಪಿ ಹಕಲ್ ಐಸಲ್ ಕೃತ್ಯ ಗೊತ್ತಾಗಿದೆ.
PublicNext
17/02/2021 04:21 pm