ಚಿಕಾಗೊ: ಕಾನೂನುಬಾಹಿರವಾಗಿ 3,200 ವಯಾಗ್ರ ಮಾತ್ರೆ ಸಾಗಿಸಲು ಯತ್ನಿಸಿದ ಭಾರತೀಯ ವ್ಯಕ್ತಿಯೊಬ್ಬ ಅಮೆರಿಕದ ಚಿಕಾಗೊದಲ್ಲಿ ಸಿಕ್ಕಿಬಿದ್ದಿದ್ದಾನೆ.
ಆರೋಪಿಯು ಭಾರತದ ಪ್ರವಾಸ ಮುಗಿಸಿ ಚಿಕಾಗೊದ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈ ವೇಳೆ ಆತನ ಬ್ಯಾಗ್ ಪರಿಶೀಲನೆ ಮಾಡಿದಾಗ 100 ಗ್ರಾಂ ತೂಕದ 3,200 ವಯಾಗ್ರ ಮಾತ್ರೆ ಸಿಕ್ಕಿವೆ. ಇವುಗಳ ಮೌಲ್ಯ 96,000 ಯುಎಸ್ ಡಾಲರ್ (ಸುಮಾರು69.87 ಲಕ್ಷ ರೂ.) ಎಂದು ಅಂದಾಜಿಸಲಾಗಿದೆ.
ಯಾಕೆ ಇಷ್ಟೊಂದು ಮಾತ್ರೆಗಳನ್ನು ಇಟ್ಟುಕೊಂಡಿದ್ದೀರಾ ಎಂದು ಯುಎಸ್ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆತ, 'ಇವು ನಮ್ಮ ಸ್ನೇಹಿತರಿಗಾಗಿ' ಎಂದು ಹೇಳಿದ್ದಾರೆ. ಆರೋಪಿಯನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು ಎಲ್ಲ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
PublicNext
06/02/2021 04:52 pm