ಪೆರು: ಸಹೋದ್ಯೋಗಿಯ ಮೇಲೆ ಸಿಲಿಂಡರ್ ಎತ್ತಿ ಹಾಕಿದ ದುಷ್ಕರ್ಮಿ ಕೊಲೆ ಮಾಡಿದ್ದಾನೆ. ಇದರ ಭಯಾನಕ ವಿಡಿಯೋ ವೈರಲ್ ಆಗುತ್ತಿದೆ.
ಪೆರು ದೇಶದ ಅಯಚುಕೊ ನಗರದಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದಾಗಿದೆ. ಸಿಲಿಂಡರ್ ಸಂಗ್ರಹಿಸುವ ಗೋದಾಮಿನಲ್ಲಿ ಈ ಘಟನೆ ನಡೆದಿದೆ. ಸಿಲಿಂಡರ್ ಪರಿಶೀಲಿಸಲು ಕೆಳಗೆ ಬಗ್ಗಿದ ಸಹೋದ್ಯೋಗಿಯ ಮೇಲೆ ದುಷ್ಕರ್ಮಿ ಸಿಲಿಂಡರ್ ಎತ್ತಿ ಹಾಕಿದ್ದಾನೆ. ನಂತರ ಆತ ನಿತ್ರಾಣಗೊಂಡು ಬಿದ್ದಾಗ ಇನ್ನೊಂದೆರಡು ಸಿಲಿಂಡರ್‌ಗಳನ್ನು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
PublicNext
13/09/2022 07:47 pm