ಪೋರ್ಚುಗಲ್: ನಮ್ಮ ದೇಶದಲ್ಲಿ ಜಿಂಕೆ, ಸಾರಂಗವನ್ನು ಭೇಟಿ ಆಡುವುದು ಅಪರಾಧ. ಆದರೆ ಸ್ಪ್ಯಾನಿಷ್ ಬೇಟೆಗಾರರು 500ಕ್ಕೂ ಹೆಚ್ಚು ಜಿಂಕೆ ಹಾಗೂ ನೂರಾರು ಕಾಡು ಹಂದಿಗಳನ್ನು ಹತ್ಯೆಗೈದಿದ್ದಾರೆ.
16 ಮಂದಿ ಬೇಟೆಗಾರರು ಬೇಟೆಯ ಬಳಿಕ ಎಲ್ಲ ಸತ್ತ ಜಿಂಕೆ ಹಾಗೂ ಕಾಡು ಹಂದಿಗಳನ್ನು ಒಂದು ಕಡೆ ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೆ ಬೇಟೆಗಾರರು ತಾವು ಹತ್ಯಗೈದ ಪ್ರಾಣಿಗಳ ಮುಂದೆ ನಿಂತು ಕ್ಯಾಮೆರಾಗೆ ಪೋಸ್ ನೀಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.
ಸ್ಪ್ಯಾನಿಷ್ ಬೇಟೆಗಾರರಿಂದ ನೀಚ ಕೃತ್ಯ ನಡೆದಿದೆ ಎಂದು ಪೋರ್ಚುಗೀಸ್ ಪರಿಸರ ಸಚಿವ ಜೊನೊ ಫರ್ನಾಂಡಿಸ್ ಹೇಳಿದ್ದಾರೆ. ಬೇಟೆಯ ಬಗ್ಗೆ ಪೋರ್ಚುಗಲ್ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.
PublicNext
25/12/2020 11:12 am