ಕಾಬೂಲ್: ಸುಮಾರು 60 ಲಕ್ಷ ಜನಸಂಖ್ಯೆ ಇರುವ ಅಪ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಪರಿಸ್ಥಿತಿ ಕೈ ಮೀರಿದೆ. ಇಡೀ ದೇಶವನ್ನು ಆವರಿಸಿರುವ ತಾಲಿಬಾನಿಗಳು ತಮ್ಮದೇ ಸರ್ಕಾರ ರಚಿಸಿಕೊಂಡಿದ್ದಾರೆ. ಈ ನಡುವೆ ಪ್ರಾಣ ಭೀತಿಯಿಂದ ದೇಶ ತೊರೆಯಲು ಮುಂದಾಗಿದ್ದ ಸಾವಿರಾರು ಸಂಖ್ಯೆಯ ಜನ ನೂಕುನುಗ್ಗಲಿನ ನಡುವೆ ವಿಮಾನ ಹತ್ತಿದ್ದರು. ವಿಮಾನ ಮೇಲೆ ಹಾರುತ್ತಿದ್ದಂತೆ ದುರಂತವೊಂದು ನಡೆದಿದೆ. ವಿಮಾನದ ಟೈರ್ ಇರುವ ಸ್ಥಳದಲ್ಲಿ ಇದ್ದ ಮೂವರು ಅಪ್ಘನ್ ನಾಗರಿಕರು ಗಾಳಿಯ ರಭಸಕ್ಕೆ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
PublicNext
16/08/2021 04:03 pm