ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ ಅಧ್ಯಕ್ಷ ಟ್ರಂಪ್‌ಗೆ ಬಂದ ಪತ್ರದಲ್ಲಿ ರಿಕಿನ್ ವಿಷ: ಶ್ವೇತಭವನ ಸಿಬ್ಬಂದಿಯಿಂದ ತಪ್ಪಿದ ಭಾರೀ ಅನಾಹುತ!

ವಾಷಿಂಗ್ಟನ್: ಅಮೆರಿಕದ ಶ್ವೇತಭವನದ ಸಿಬ್ಬಂದಿಯ ಮುಂಜಾಗ್ರತಾ ಕ್ರಮದಿಂದಾಗಿ ಭಾರೀ ಅನಾಹುತವೇ ತಪ್ಪಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಲ್ಲಿ ಶ್ವೇತಭವನಕ್ಕೆ ಬಂದ ಅನಾಮಿಕ ಪತ್ರವೊಂದರಲ್ಲಿ ಹಾನಿಕಾರಕ ರಿಕಿನ್ ವಿಷ ಇರುವುದನ್ನು ಪತ್ತೆಯಾಗಿದೆ.

ವರದಿಗಳ ಪ್ರಕಾರ, ಕೆನಡಾದಿಂದ ಬಂದಿದೆ ಎನ್ನಲಾದ ಅನಾಮಿಕ ಪತ್ರದ ಲಕೋಟೆಯನ್ನು ಶ್ವೇತಭವನದ ಸಿಬ್ಬಂದಿಯು ಪರಿಶೀಲನೆಗೆ ಒಳಪಡಿಸಿದ್ದರು. ಈ ವೇಳೆ ಅದರಲ್ಲಿ ರಿಕಿನ್ ವಿಷದ ಅಂಶ ಇರುವುದು ಪತ್ತೆಯಾಗಿದೆ. ಸದ್ಯ ಪತ್ರವನ್ನು ಯಾರು ಕಳುಹಿಸಿದ್ದು, ಎಲ್ಲಿಂದ ಬಂದಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲು ಅಮೆರಿಕದ ಸಿಕ್ರೇಟ್ ಸರ್ವೀಸ್ ಅಂಚೆ ಇಲಾಖೆಯ ನೆರವು ಕೋರಿದೆ.

ರಿಕಿನ್ ವಿಷವು ಕೇವಲ 36 ರಿಂದ 72 ಗಂಟೆಗಳ ಅವಧಿಯಲ್ಲಿ ವ್ಯಕ್ತಿಯ ಸಾವಿಗೆ ಕಾರಣವಾಗಬಲ್ಲದು. ಇದನ್ನು ಜೈವಿಕ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆಯೂ ಅಮರಿಕದಲ್ಲಿ ಅನೇಕ ಬಾರಿ ಗಣ್ಯ ವ್ಯಕ್ತಿಗಳಿಗೆ ರಿಕಿನ್ ಲೇಪಿತ ಪತ್ರಗಳು ಬಂದಿರುವ ಬಗ್ಗೆ ವರದಿಯಾಗಿತ್ತು.

Edited By : Vijay Kumar
PublicNext

PublicNext

20/09/2020 08:55 am

Cinque Terre

59.87 K

Cinque Terre

2