ಅಥಣಿ: ಕೃಷಿ ಕಾರ್ಯ ಬಳಕೆಯ ವಿದ್ಯುತ್ ಮೋಟಾರ್ ಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಂಬಗಿ ಗ್ರಾಮಸ್ಥರು ಕಳ್ಳರಿಗೆ ಧರ್ಮದೇಟು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಿಂದ ಕಳ್ಳತನ ಮಾಡಿಕೊಂಡು ಈ ಇಬ್ಬರು ಪಂಪ್ ಸೆಟ್ ಹೊತ್ತುಕೊಂಡು ಹೋಗುತ್ತಿದ್ದರು. ಈ ಬಗ್ಗೆ ಗ್ರಾಮಸ್ಥರಿಗೆ ಅನುಮಾನ ಬಂದು ಕಳ್ಳರನ್ನು ವಿಚಾರಿಸಿದಾಗ ಸತ್ಯ ಹೊರಬಂದಿದೆ.
ಮುಂಜಾವ 5ರ ವೇಳೆಗ ಜಂಬಗಿ ಬ್ಯಾರೇಜ್ ಮೇಲೆ ಕಳ್ಳರು ನಿಂತು ಮಾತನಾಡುತ್ತಿರುವ ಮಾತುಗಳನ್ನು ರೈತರು ಕೇಳಿಸಿಕೊಂಡು ಖದೀಮರ ಹಿಂದೆ ಬಿದ್ದಾಗ ಬಾಯಿ ಬಿಟ್ಟಿದ್ದಾರೆ. ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ರೈತ ಅಶೋಕ್ ಬಿಳ್ಳೂರ ಅವರಿಗೆ ಸೇರಿದ ಕೃಷಿ ಪಂಪ್ ಸೆಟ್ ಕಳ್ಳತನ ಮಾಡಿರುವುದಾಗಿ ಕಳ್ಳರು ತಪ್ಪೊಪ್ಪಿಕೊಂಡಿದ್ದಾರೆ.
ಇಬ್ಬರು ಆರೋಪಿಗಳು ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಅಮಿತ್ ಹಾಗೂ ನಿಖಿಲ್ ಎಂದು ತಿಳಿದುಬಂದಿದೆ. ಇವರು ಶೋಕಿಗಾಗಿ ಪಂಪ್ ಸೆಟ್ ಕದಿಯುತ್ತಿದ್ದರು. ಜಮಖಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
25/07/2022 11:35 pm