ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಶಹಾಪುರ ಬಸ್ ನಿಲ್ದಾಣದಲ್ಲಿ ಎರಡು ತಿಂಗಳ ಹೆಣ್ಣುಮಗು ಪತ್ತೆ…

ಯಾದಗಿರಿ: ಈ ಹಸುಗೂಸು ಹುಟ್ಟಿದ ಎರಡೇ ತಿಂಗಳಿಗೆ ತಬ್ಬಲಿಯಾಗಿದೆ. ಈ ಹೆಣ್ಣು ಮಗುವನ್ನ ನೋಡಿದರೆ ಎಂಥವರಿಗೂ ಸಹ ಕರುಳು ಚುರುಕ್ ಎನ್ನುತ್ತೆ.. ಹೌದು..ಬಸ್ ನಿಲ್ದಾಣದಲ್ಲಿ ಅಪರಿಚಿತ ಹೆಣ್ಣು ಮಗುವೊಂದು ಪತ್ತೆಯಾಗಿರೋ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ..

ಎರಡು ತಿಂಗಳ ಹೆಣ್ಣು ಮಗುವನ್ನು ಬಟ್ಟೆಯಲ್ಲಿ ಮುಚ್ಚಿ ಪೋಷಕರು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದು, ಮಗು ಅಳುವುದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಮಗು ಯಾರದು? ಯಾಕೆ ಬಿಟ್ಟು ಹೋಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಶಿಶು ಅಭಿವೃದ್ಧಿ ಅಧಿಕಾರಿಗಳು ಮಗುವನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಅದೇನೇ ಇರಲಿ.. ಸಮಾಜದಲ್ಲಿ ಮಕ್ಕಳಿಲ್ಲದವರು ಮಮತೆಯಿಂದ ಪ್ರೀತಿಸಲು ಮಗು ಕರುಣಿಸಲೆಂದು ಬೇಡಿಕೊಳ್ಳುತ್ತಿದ್ದರೆ, ಈ ತಾಯಿ ಮಗುವನ್ನು ಹೆತ್ತು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರೋದು ಮಾತ್ರ ಶೋಚನಿಯ ಸಂಗತಿ.

ಮೌನೇಶ ಬಿ.ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್, ಯಾದಗಿರಿ

Edited By : Manjunath H D
PublicNext

PublicNext

25/06/2022 10:38 pm

Cinque Terre

195.32 K

Cinque Terre

18

ಸಂಬಂಧಿತ ಸುದ್ದಿ