ಪಂಜಾಬ್: ಹೆತ್ತ ಕಂದಮ್ಮಳನ್ನು ಕೊಲೆಗೈದ ಪಾಪಿ ದಂಪತಿ ನಂತರ ಪರಾರಿಯಾಗಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ಪಂಜಾಬ್‌ನ ನಭಾದ ಪಾಂಡುಸರ್ ಪ್ರದೇಶದಲ್ಲಿ ನಡೆದಿದೆ.
ಪರಿ ಎಂಬ ಹೆಸರಿನ 3 ತಿಂಗಳ ಮಗು ಪಾಪಿ ಪೋಷಕರ ಅಟ್ಟಹಾಸಕ್ಕೆ ಬಲಿಯಾಗಿದೆ. ಮಗುವನ್ನು ಗೋಡೆಗೆ ಹೊಡೆದು ಸಾಯಿಸಲಾಗಿದ್ದು, ಗೋಡೆಯ ಮೇಲೆ ರಕ್ತದ ಕುರುಹುಗಳೂ ಪತ್ತೆಯಾಗಿವೆ. ಈ ಬಗ್ಗೆ ಬಾಲಕಿಯ ತಾತ ಸಂಜೀವ್ ಕುಮಾರ್ ಮತ್ತು ಅಜ್ಜಿ ಮೋನಾ ರಾಣಿ ಹೇಳಿಕೆ ನೀಡಿದ್ದು, ತಮ್ಮ ಮಗ ಅಜಯ್ ಕುಮಾರ್‌ಗೆ ಸುಮಾರು ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಅಜಯ್ ಮಾದಕ ವ್ಯಸನಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಅಜಯ್ ಕುಡಿದು ಮನೆಗೆ ಬಂದಿದ್ದ. ಬೆಳಗಿನ ಜಾವ ಮೂರರ ಸುಮಾರಿಗೆ ಮಗನ ಕೋಣೆಯಿಂದ ಜೋರಾದ ಶಬ್ಧ ಕೇಳಿ ಬಂತು. ತಕ್ಷಣವೇ ನಾವು ಅಲ್ಲಿಗೆ ಹೋದೆವು. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ನಭಾದಲ್ಲಿರುವ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಮಗುವಿನ ಪೋಷಕರು ಮನೆಯ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸದ್ಯ ಇಬ್ಬರೂ ತಲೆಮರೆಸಿಕೊಂಡಿದ್ದು ಕೂಡಲೇ ಪತ್ತೆ ಹಚ್ಚಿ ಬಂಧಿಸುತ್ತೇವೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
PublicNext
31/03/2022 10:36 pm