ರಾಂಚಿ: ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ (IIT) ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ಐಎಎಸ್ ಅಧಿಕಾರಿ ಸಯ್ಯದ್ ರಿಯಾಜ್ ಅಹ್ಮದ್‌ನ್ನು ಜಾರ್ಖಂಡ್ ಸರ್ಕಾರ ಶುಕ್ರವಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಡೆಪ್ಯುಟಿ ಡೆವಲಪ್‌ಮೆಂಟ್ ಕಮಿಷನರ್ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ ಬಳಿಕ ವಿದ್ಯಾರ್ಥಿನಿಗೆ ಸಯ್ಯದ್ ರಿಯಾಜ್ ಅಹ್ಮದ್ ಕಿರುಕುಳ ನೀಡಿದ್ದರು.
ಖುಂಟಿ ಎಂಬಲ್ಲಿ ಸಬ್ ಡಿವಿಷನಲ್ ಮೆಜಿಸ್ಟ್ರೇಟ್ ಆಗಿರುವ ಅಹ್ಮದ್‌ನ್ನು ಗುರುವಾರ ಬಂಧಿಸಲಾಗಿದ್ದು, ಎರಡು ವಾರಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿ ಅಹ್ಮದ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಖುಂಟಿ ಎಸ್ಡಿಎಂ ಆಗಿರುವ ಸಯ್ಯದ್ ರಿಯಾಜ್ ಅಹ್ಮದ್‌ನ್ನು ಅಮಾನತು ಮಾಡಲು ಮುಖ್ಯಮಂತ್ರಿ ಹೇಮಂತ್ ಸೊರೇನ್ ಆದೇಶಿಸಿದ್ದಾರೆ. ಎಸ್ಡಿಎಂ ವಿರುದ್ಧ ಲೈಂಗಿಕ ಕಿರುಕುಳ ಆರೋಪವಿದೆ ಎಂದು ಮುಖ್ಯಮಂತ್ರಿಯವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
PublicNext
08/07/2022 07:28 pm