ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಿಕೆಟ್ ಕೇಳಿದ್ದಕ್ಕೆ ಟಿಟಿ‌ಇ ಮೇಲೆ ರೈಲ್ವೇ ಪೊಲೀಸರೇ ಹಲ್ಲೆ ಮಾಡಿದರಾ?

ಭಾಗಲಪುರ: ನಿಮ್ಮ ಟಿಕೆಟ್ ತೋರಿಸಿ ಎಂದಿದ್ದಕ್ಕೆ ರೈಲ್ವೇ ಪೊಲೀಸರು ಟಿಟಿ‌ಇ (travel tickets examiner) ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ಹಿರಿಯ ಟಿಟಿ‌ಇ ಹೇಳಿಕೆ ನೀಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ದಾನಾಪುರ-ಭಾಗಲಪುರ ಇಂಟರ್‌ಸಿಟಿ ರೈಲಿನಲ್ಲಿ ಈ ಘಟನೆ ನಡೆದಿದೆ. ರೈಲ್ವೇ ಪೊಲೀಸ್ ಒಬ್ಬರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಟಿಟಿ‌ಇ ದಿನೇಶ್ ಕುಮಾರ್ ಸಿಂಗ್ ಟಿಕೆಟ್ ಕೇಳಿದ್ದಾರೆ. ಟಿಕೆಟ್ ಇಲ್ಲದ ಕಾರಣ, ಇತರ ಪ್ರಯಾಣಿಕರು ಬಂದ ನಂತರ ಸೀಟ್ ಬಿಟ್ಟು ಕೊಡಿ ಎಂದು ದಿನೇಶ್ ಸೂಚಿಸಿದ್ದಾರೆ. ಅಷ್ಟಕ್ಕೆ ಕುಪಿತಗೊಂಡ ರೈಲ್ವೇ ಪೊಲೀಸ್ ಅಧಿಕಾರಿ ಭಕ್ತಿಯಾರ್‌ಪುರ ಸ್ಟೇಶನ್ ಬಂದಾಗ ತಮ್ಮ ಇತರ ಸಿಬ್ಬಂದಿಯನ್ನು ಕರೆಯಿಸಿಕೊಂಡು ದಿನೇಶ್ ಕುಮಾರ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ‌.

ಈ ಘಟನೆ ಬಗ್ಗೆ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ವಿಚಾರಣೆ‌ ನಡೆಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

07/07/2022 05:55 pm

Cinque Terre

69.1 K

Cinque Terre

2

ಸಂಬಂಧಿತ ಸುದ್ದಿ