ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಶಂಕರಣ್ಣ ವನಿಕ್ಯಾಳನನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಹಿರಿಯ ಕೆಎಸ್ಎಸ್ ಅಧಿಕಾರಿ ಶಂಕರಣ್ಣ 7.50 ಲಕ್ಷ ಬಿಲ್ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊವಿಡ್ ಸುರಕ್ಷಾ ಚಕ್ರ ಹೆಲ್ಪ್‌ಲೈನ್ ಮಾಲೀಕ ಶರಣು ಎಂಬುವರ ಬಳಿ ಶೇಕಡಾ 2ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದರು.
ಕೊವಿಡ್ 2ನೇ ಅಲೆಯಲ್ಲಿ ಹೆಲ್ಪ್‌ಲೈನ್ ಆರಂಭಿಸಲಾಗಿತ್ತು. 50 ಲಕ್ಷಕ್ಕೂ ಹೆಚ್ಚಿನ ಬಿಲ್ ಪಾವತಿ ಬಾಕಿ ಉಳಿದಿತ್ತು. ಈ ಪೈಕಿ 2ನೇ ಕಂತಿನ ಹಣ ಬಿಡುಗಡೆಗೆ ಪಾಲಿಕೆ ಅಕೌಂಟೆಂಟ್ ಚನ್ನಪ್ಪ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಎಸಿಬಿ ಅಧಿಕಾರಿಗಳಿಗೆ ಶರಣು ದೂರು ನೀಡಿದ್ದ. ಇಂದು ಸಂಜೆ ಹಣ ಪಡೆಯುವಾಗ ಎಸಿಬಿ ತಂಡ ದಾಳಿ ನಡೆಸಿ ಆಯುಕ್ತ ಶಂಕರಣ್ಣ, ಅಕೌಂಟೆಂಟ್ ಚನ್ನಪ್ಪನನ್ನು ಬಂಧಿಸಿದ್ದಾರೆ.
PublicNext
02/06/2022 03:28 pm